Latest

ರೋಚಕ ತಿರುವು ಪಡೆದ ನಂದಿಗ್ರಾಮದ ಮತ ಎಣಿಕೆ

ಪ್ರಗತಿವಾಹಿನಿ ಸುದ್ದಿ; ಕೋಲ್ಕತ್ತ: ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಯಲ್ಲಿ ಟಿಎಂಸಿ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಹ್ಯಾಟ್ರಿಕ್ ಗೆಲುವು ಸಾಧಿಸಿದ್ದರೂ ನಂದಿಗ್ರಾಮ ಕ್ಷೇತ್ರದಲ್ಲಿ ಸೋಲನುಭವಿಸಿದ್ದಾರೆ.

ನಂದಿಗ್ರಾಮದ ಅಂತಿಮ ಸುತ್ತಿನ ಮತಎಣಿಕೆ ಫಲಿತಾಂಶ ಹೊರಬಿದ್ದಿದ್ದು, ಬಿಜೆಪಿ ಅಭ್ಯರ್ಥಿ ಸುವೇಂದು ಅಧಿಕಾರಿ ಗೆಲುವು ಸಾಧಿಸಿದ್ದಾರೆ. ಈ ಮೂಲಕ ತಮ್ಮ ಮಾಜಿ ಆಪ್ತನ ವಿರುದ್ಧವೇ ಮಮತಾ ಬ್ಯಾನರ್ಜಿ ಸೋತಿದ್ದಾರೆ ಎನ್ನಲಾಗಿದೆ.

16 ಸುತ್ತಿನ ಫಲಿತಾಂಶ ಹೊರ ಬೀಳುತ್ತಿದ್ದಂತೆಯೇ ಮಮತಾ ಬ್ಯಾನರ್ಜಿ ನಂದಿಗ್ರಾಮದಲ್ಲಿ ಗೆಲುವು ಸಾಧಿಸಿದ್ದಾರೆ ಎನ್ನಲಾಗಿತ್ತು. ಆದರೆ ಅಂತಿಮ ಸುತ್ತಿನ ಮತ ಎಣಿಕೆ ಬಿಗ್ ಟ್ವಿಸ್ಟ್ ಪಡೆದುಕೊಂಡಿದ್ದು, ಸುವೆಂದು ಅಧಿಕಾರಿ 1957 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಆದರೆ ಇದನ್ನು ಒಪ್ಪಿಕೊಳ್ಳದ ಮಮತಾ ನಂದಿಗ್ರಾಮ ಮತ ಎಣಿಕೆ ಇನ್ನೂ ಮುಗಿದಿಲ್ಲ ಊಹಾಪೋಹದ ಸುದ್ದಿ ಬೇಡ ಎಂದು ಹೇಳಿದ್ದಾರೆ. ಈ ನಡುವೆ ನಂದಿಗ್ರಾಮದಲ್ಲಿ ಮರು ಮತ ಎಣಿಕೆ ಒತ್ತಾಯಗಳು ಕೇಳಿಬಂದಿವೆ.

ಟಿಎಂಸಿ ಹ್ಯಾಟ್ರಿಕ್ ಗೆಲುವು; ಜಯಭೇರಿ ಬೆನ್ನಲ್ಲೇ ವ್ಹೀಲ್ ಚೇರ್ ನಿಂದ ಎದ್ದು ನಡೆದ ಮಮತಾ ಬ್ಯಾನರ್ಜಿ

Home add -Advt

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button