Kannada NewsKarnataka NewsLatest

2ನೇ ಪ್ರಾಶಸ್ತ್ಯದ ಮತ ಮ್ಯಾಜಿಕ್ ಮಾಡಲಿದೆಯೇ? ಬಿಜೆಪಿ ಆಸೆ ಇನ್ನೂ ಕಮರಿಲ್ಲ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಬೆಳಗಾವಿ ದ್ವಿಸದಸ್ಯ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಚನ್ನರಾಜ ಹಟ್ಟಿಹೊಳಿ ಮೊದಲ ಪ್ರಾಶಸ್ತ್ಯದ ಮತಗಳಿಂದಲೇ ಗೆಲುವು ಸಾಧಿಸಿದ್ದಾರೆ. ಆದರೆ ಮೊದಲ ಪ್ರಾಶಸ್ತ್ಯದ ಮತಗಳಲ್ಲಿ ಎರಡನೇ ಸ್ಥಾನದಲ್ಲಿರುವ ಪಕ್ಷೇತರ ಅಭ್ಯರ್ಥಿ ಲಖನ್ ಜಾರಕಿಹೊಳಿ ಮತ್ತು ಮೂರನೇ ಸ್ಥಾನದಲ್ಲಿರುವ ಮಹಾಂತೇಶ ಕವಟಗಿಮಠ ಅವರು ಎರಡನೇ ಪ್ರಾಶಸ್ತ್ಯದ ಮತಗಳ ಮೇಲೆ ನಿರೀಕ್ಷೆ ಹೊಂದಿದ್ದಾರೆ.

ಚನ್ನರಾಜ ಹಟ್ಟಿಹೊಳಿ ಪ್ರಥಮ ಪ್ರಾಶಸ್ತ್ಯದ 3,715 ಮತಗಳನ್ನು ಪಡೆಯುವ ಮೂಲಕ ಭರ್ಜರಿ ಗೆಲುವು ಸಾಧಿಸಿದ್ದಾರೆ.

ಪಕ್ಷೇತರ ಅಭ್ಯರ್ಥಿ ಲಖನ್ ಜಾರಕಿಹೊಳಿ ಅವರಿಗೆ 2,526 ಹಾಗೂ ಬಿಜೆಪಿಯ ಮಹಾಂತೇಶ ಕವಟಗಿಮಠ ಅವರಿಗೆ 2454 ಮತಗಳು ಬಿದ್ದಿವೆ. ಎರಡನೆ ಪ್ರಾಶಸ್ತ್ಯದ ಮತಗಳು ಮ್ಯಾಜಿಕ್ ಮಾಡಿದಲ್ಲಿ ಮಹಾಂತೇಶ ಕವಟಗಿಮಠ ಗೆಲುವು ಸಾಧಿಸಿದರೂ ಆಶ್ಚರ್ಯವಿಲ್ಲ.

ಈ ಇಬ್ಬರಿಗೂ ಗೆಲ್ಲುವಷ್ಟು ಮೊದಲ ಪ್ರಾಶಸ್ತ್ಯದ ಮತಗಳು ಬಂದಿಲ್ಲ. ಹಾಗಾಗಿ ಚನ್ನರಾಜ ಹಟ್ಟಿಹೊಳಿ ಪಡೆದಿರುವ ಮೊದಲ ಪ್ರಾಶಸ್ತ್ಯದ ಮತಗಳಲ್ಲಿ 2ನೇ ಪ್ರಾಶಸ್ತ್ಯದ ಮತಗಳನ್ನು ಯಾರು ಹೆಚ್ಚು ಪಡೆದಿದ್ದಾರೆ ಎನ್ನುವುದನ್ನು ಲೆಕ್ಕ ಹಾಕಲಾಗುತ್ತದೆ.

ಲಖನ್ ಜಾರಕಿಹೊಳಿ ಅವರುಗೆ ಸುಮಾರು 600 ಎರಡನೇ ಪ್ರಾಶಸ್ತ್ಯದ ಮತ ಹಾಗೂ ಮಹಾಂತೇಶ ಕವಟಗಿಮಠ ಅವರಿಗೆ ಸುಮಾರು 750 ದ್ವಿತೀಯ ಪ್ರಾಶಸ್ತ್ಯದ ಮತಗಳು ಬೇಕಾಗಿವೆ. ಇದರಲ್ಲಿ ಸಹ ಗುರಿ ತಲುಪದಿದ್ದರೆ ಅಥವಾ ಇಬ್ಬರೂ ಗುರಿ ದಾಟಿದರೆ ಎರಡನೇ ಸ್ಥಾನದಲ್ಲಿರುವವರ ಮತದಲ್ಲಿ 2ನೇ ಪ್ರಾಶಸ್ತ್ಯದ ಮತ ಯಾರಿಗೆ ಬಿದ್ದಿದೆ ಎಂದು ಲೆಕ್ಕ ಹಾಕಲಾಗುತ್ತಿದೆ.

ಈ ಎಲ್ಲ ಸರ್ಕಸ್ ನಡೆದ ನಂತರ ಪಕ್ಕಾ ಫಲಿತಾಂಶ ಗೊತ್ತಾಗಲಿದೆ. ಅಲ್ಲಿಯವರೆಗೂ ಅಧಿಕೃತವಾಗಿ ಫಲಿತಾಂಶ ಪ್ರಕಟವಾಗುವುದಿಲ್ಲ. ಹಾಗಾಗಿ ಎರಡನೇ ಪ್ರಾಶಸ್ತ್ಯದ ಮತಗಳು ಮ್ಯಾಜಿಕ್ ಮಾಡಲಿವೆ ಎನ್ನುವ ನಿರೀಕ್ಷೆಯಲ್ಲಿ ಬಿಜೆಪಿ ಇದೆ.

ಚನ್ನರಾಜ ಹಟ್ಟಿಹೊಳಿಗೆ 3715 ಮತ!

 

 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button