Politics

*ನಕ್ಸಲರ ಬಳಿ ಇದ್ದ ಶಸ್ತ್ರಾಸ್ತ್ರ ಹುಡಕಿಸುವ ಕೆಲಸ ನಡೆಯುತ್ತಿದೆ: ಗೃಹ ಸಚಿವ ಜಿ. ಪರಮೇಶ್ವರ್*

ಪ್ರಗತಿವಾಹಿನಿ ಸುದ್ದಿ: ನಕ್ಸಲರು ಶಸ್ತ್ರಾಸ್ತ್ರವನ್ನು ಕಾಡಿನಲ್ಲಿ ಎಲ್ಲಿ ಬೀಸಾಕಿದ್ದಾರೆ ಎಂದು ಗೊತ್ತಿಲ್ಲ ಅದನ್ನು ಹುಡುಕಿಸುವ ಕೆಲಸವನ್ನು ಇಲಾಖೆ ಮಾಡುತ್ತಿದೆ ಎಂದು ಗೃಹ ಸಚಿವ ಜಿ. ಪರಮೇಶ್ವರ್ ಹೇಳಿದರು.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಕ್ಸಲರು ಶಸ್ತ್ರಾಸ್ತ್ರ ಹಸ್ತಾಂತರಿಸದ್ದಕ್ಕೆ ಬಿಜೆಪಿ ಟೀಕೆಗೆ ಪ್ರತಿಕ್ರಿಯಿಸಿದರು. ಬಿಜೆಪಿಯವರು ಹೇಳ್ತಾ ಇರ್ತಾರೆ. ನಾವು ಮಾಡುವ ಕೆಲಸ ಮಾಡ್ತಾ ಇರ್ತೇವೆ. ಶಸ್ತ್ರಾಸ್ತ್ರ ಹುಡುಕಿಸಬೇಕು. ಅವರನ್ನು ಕೇಳುತ್ತೇವೆ. ಅವರಿಂದ ಸಹಾಯ ತೆಗೆದುಕೊಳ್ಳುತ್ತೇವೆ, ಅದೆಕ್ಕೆಲ್ಲ ಪ್ರಕ್ರಿಯೆ ಇರುತ್ತದೆ. ಜೆಪಿಯವರಿಗೆ ಏನು ಗೊತ್ತಿಲ್ವಾ? ಅವರು ಕೂಡ ಸರ್ಕಾರ ನಡೆಸಿದ್ದರು ಎಂದು ಕಿಡಿಕಾರಿದರು.

ಇನ್ನೋರ್ವ ನಕ್ಸಲ್ ತಪ್ಪಿಸಿಕೊಂಡ ವಿಚಾರವಾಗಿ ಮಾತನಾಡಿ, ಇವರು ಅವರನ್ನು ಹೊರಹಾಕಿದ್ದರು ಅಂತ ಇದೆ. ಅದಕ್ಕೆ ಕಾರಣ ಏನು ಅಂತ ಗೊತ್ತಿಲ್ಲ, ಅವರನ್ನು ಹುಡುಕಿಸುತ್ತೇವೆ. ಅವರು ಅದೇ ಭಾಗ, ಚಿಕ್ಕಮಗಳೂರು ಭಾಗದಲ್ಲಿದ್ದಾರೆ ಎನ್ನುವ ಮಾಹಿತಿ ಇದೆ. ಅವರನ್ನು ಹುಡುಕಿಸುವ ಕೆಲಸ ಮಾಡುತ್ತೇವೆ. ನಮಗೆ ಸಿಕ್ಕಿರುವ ಮಾಹಿತಿ ಪ್ರಕಾರ ಈ 6 ಜನ ಇದ್ದಾರೆ ಎನ್ನಲಾಗಿತ್ತು. ಬೇರೆ ರಾಜ್ಯದಿಂದಲೂ ಬಂದರೇ ಅದರ ಮೇಲೆ ನಿಗಾ ಇಡಲಾಗುತ್ತದೆ ಎಂದರು.

ಹೊರಗಡೆಯಿಂದ ಒರಿಸ್ಸಾ, ಕೇರಳದಿಂದ ಬರುವ ಸಾಧ್ಯತೆ ಇರುತ್ತದೆ. ಅದರ ಮೇಲೆ ನಾವು ನಿಗಾ ಇಡುತ್ತೇವೆ. ಶಸ್ತ್ರಾಸ್ತ್ರದ ಇಟ್ಟುಕೊಂಡು ಹೋರಾಟ ಮಾಡೋದು ಬೇಡ ಎಂದು ಸಿಎಂ ಮನವಿ ಮಾಡಿದ್ದಾರೆ ಎಂದ ಅವರು, ವಿಕ್ರಮಗೌಡ ಕುಟುಂಬ ಪರಿಹಾರ ವಿಚಾರಕ್ಕೆ ಸಂಬಂಧಿಸಿ ಮಾತನಾಡಿ, ಅದನ್ನು ಕೂಡ ಪರಿಶೀಲನೆ ಮಾಡುತ್ತೇವೆ. ಆ ಪ್ರಕರಣ ಬೇರೆ, ಈ ಪ್ರಕರಣ ಬೇರೆಯಾಗಿದೆ ಎಂದು ಹೇಳಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button