ಪ್ರಗತಿವಾಹಿನಿ ಸುದ್ದಿ, ಮಾಂಜರಿ- ದಕ್ಷಿಣ ಕಾಶಿ, ಸಂಸ್ಕಾರ, ಸಂಸ್ಕೃತಿಯ ಪುಣ್ಯತಾಣವಾಗಿರುವ ಚಿಕ್ಕೋಡಿ ತಾಲೂಕಿನ ಸುಕ್ಷೇತ್ರ ಯಡೂರದ ಶ್ರೀ ವೀರಭದ್ರ ದೇವಸ್ಥಾನ ಮತ್ತು ಶ್ರೀ ಕಾಡಸಿದ್ದೆಶ್ವರ ಮಠದ ವಿಶಾಳಿ ಜಾತ್ರಾ ಮಹೊತ್ಸವ ಹಾಗೂ ಮಹಾರಥೋತ್ಸವ ಜ. ೨೩ ರಿಂದ ೨೫ ವರೆಗೆ ಜರುಗಲಿದೆ.
ಈ ವರ್ಷ ವೀರಭದ್ರ ದೇವಸ್ಥಾನ ಹಾಗೂ ಕಾಡಸಿದ್ದೇಶ್ವರ ಸಂಸ್ಥಾನ ಮಠದಿಂದ ನಿಡಲ್ಪಡುವ ವಿಶ್ವ ಚೇತನ ಪ್ರಶಸ್ತಿಯನ್ನು ವಿ.ಅರ್.ಎಲ್. ಸಮೂಹ ಸಂಸ್ಥೆಯ ಚೇರಮನ್ ವಿಜಯ ಸಂಕೇಶ್ವರ ಇವರಿಗೆ ನೀಡಲಾಗುವುದು. ಗುರುಕುಲ ಭೂಷಣ ಪ್ರಶಸ್ತಿಯನ್ನು ಕೊಟ್ಟುರಿನ ಸಿದ್ದಲಿಂಗ ಶಿವಾಚಾರ್ಯ ಸ್ವಾಮಿಜಿಗಳಿಗೆ ಹಾಗೂ ಗುರುಕುಲ ಭಾಸ್ಕರ ಪ್ರಶಸ್ತಿಯನ್ನು ನೋಣವಿನಕೆರೆಯ ಕರಿವೃಷಭ ದೇಶಿಕೆಂದ್ರ ಶಿವಯೋಗಿಶ್ವರ ಸ್ವಾಮಿಜಿಗಳಿಗೆ ನೀಡಲಾಗುವುದು ಎಂದು ಶ್ರೀಶೈಲ ಜಗದ್ಗುರು ಹಾಗೂ ಯಡೂರ ವೀರಭದ್ರ ದೇವಸ್ಥಾನದ ಧರ್ಮಾಧಿಕಾರಿಗಳಾದ ಡಾ. ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿಗಳು ತಿಳಿಸಿದರು.
ಇಂದು ನಡೆದ ಯಡೂರಿನ ಕಾಡಸಿದ್ದೇಶ್ವರ ಸಂಸ್ಥಾನ ಮಠದಲ್ಲಿ ಆಯೋಜಿಸಲಾದ ಸುದ್ದಿಗೊಷ್ಟಿಯಲ್ಲಿ ಅವರು ಈ ವಿಷಯ ತಿಳಿಸಿದರು.
ಬುಧವಾ ದಿ ೨೨ ರಂದು ೧೦.೩೦ಕ್ಕೆ ಸಾಮಾನ್ಯ ಜನರ ಆರೋಗ್ಯ ದೃಷ್ಟಿಯಿಂದ ಅವರಿಗೆ ಯೋಗ್ಯ ಸಲಹೆ ಮತ್ತು ಉಪಚಾರ ನೀಡುವುದಕ್ಕಾಗಿ ಉಚಿತ ಆರೋಗ್ಯ ತಪಾಸಣಾ ಶಿಬಿರ ಆಯೋಜಿಸಲಾಗಿದ್ದು ಈ ಶಿಬಿರದಲ್ಲಿ ಕೆ.ಎಲ್.ಇ ಆಸ್ಪತ್ರೆ ಬೆಳಗಾವಿ ಪಿಡಿಯಾಟ್ರಿಕ್ ಸರ್ಜರಿ ಸೆಂಟರ್ ಸಾಂಗಲಿ ಸೇವಾಸದನ ಲೈಫ್‌ಲೈನ್ ಆಸ್ಪತ್ರೆ ಮಿರಜ್ ಸಿದ್ದಗಿರಿ ಆಸ್ಪತ್ರೆ ಕನೆರಿ, ಪಾಯೋಸ್ ಆಸ್ಪತ್ರೆ ಜಯಶಿಂಗಪುರ, ಕೊಲ್ಹಾಪೂರ ಕಾನ್ಸರ್ ಸೆಂಟರ್ , ಜನನಿ ಹಾಸ್ಪಿಟಲ್ ಇವರ ಸಂಯೋಗದಲ್ಲಿ ಮಾಡಲಾಗುವುದು. ರೋಗಗಳ ತಪಾಸಣೆ ಮಾಡಲಿದ್ದು ಡಾ. ಕಮಲಾ ಗಡೆದ ಇವರು ಸ್ತ್ರೀ ರೋಗ ಮತ್ತು ಗರ್ಭಿಣಿಯರ ತಪಾಸಣೆ ಮಾಡಲಿದ್ದಾರೆ.
ಗುರುವಾರ ದಿ ೨೩ ರಂದು ಸಾಯಂಕಾಲ ೬ ಗಂಟೆಗೆ ೧೧ ಲಕ್ಷ ಬಿಲ್ವಾರ್ಚನೆ ಹಾಗೂ ರುದ್ರಾಕ್ಷಾರ್ಚನೆ ಮಂಗಲ, ಉಚಿತ ಬಿಲ್ವ ಮತ್ತು ಬನ್ನಿ ಸಸಿಗಳ ವಿತರಣೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿದೆ. ಈ ಸಮಾರಂಭದ ದಿವ್ಯ ಸಾನಿಧ್ಯವನ್ನು ಶ್ರೀಶೈಲ ಜಗದ್ಗುರು ವಹಿಸಲಿದ್ದು ನೇತೃತ್ವವನ್ನು ವಿರಭದ್ರ ಶಿವಯೋಗಿ ಶಿವಾಚಾರ್ಯ ಸ್ವಾಮಿಗಳು ಕಟಖೋಳ, ಮಹಾದೇವ ಶಿವಾಚಾರ್ಯ ಸ್ವಾಮಿಗಳು ವಾಯಿ, ಅಭಿನವ ಮೃತ್ಯುಂಜಯ ಶಿವಾಚಾರ್ಯ ಸ್ವಾಮಿಗಳು ಮಣಕವಾಡ, ಮಹಂತ ದೇಶಿಕೇಂದ್ರ ಶಿವಾಚಾರ್ಯ ಸ್ವಾಮಿಗಳು ತೊರ್ಗಸೆ ಇವರು ವಹಿಸಲಿದ್ದಾರೆ.
ಸಮಾರಂಭದ ದಿಪ ಪ್ರಜ್ವಲನೆಯನ್ನು ಸೌದತ್ತಿ ಶಾಸಕ ಆನಂದ ಮಾಮನಿ ಮಾಡಲಿದ್ದು, ಸಮಾರಂಭದ ಅಧ್ಯಕ್ಷತೆಯನ್ನು ಚಿಕ್ಕೋಡಿ ಸದಲಗಾ ಶಾಸಕ ಗಣೇಶ ಹುಕ್ಕೇರಿ ವಹಿಸಲಿದ್ದು ಈ ಸಮಾರಂಭಕ್ಕೆ ಮುಖ್ಯ ಅತಿಥಿಯಾಗಿ ರಾಮದುರ್ಗ ಶಾಸಕ ಮಹಾದೇವಪ್ಪಾ ಯಾದವಾಡ, ಬೆಳಗಾವಿ ಜಿಲ್ಲಾಧಿಕಾರಿ ಎಸ್.ಬಿ.ಬೊಮ್ಮನಹಳ್ಳಿ, ಚಿಕ್ಕೋಡಿಯ ಉಪವಿಭಾಗಾಧಿಖಾರಿ ರವೀಂದ್ರ ಕರಲಿಂಗನವರ, ಮಾಜಿ ಶಾಸಕ ಕಲ್ಲಪ್ಪಾ ಮಗೆಣ್ನವರ ಹಾಗೂ ಇನ್ನಿತರರು ಭಾಗವಹಿಸಲಿದ್ದಾರೆ.
ಶುಕ್ರವಾರ ದಿ. ೨೪ ರಂದು ಸಾಧಕರಿಗೆ ಪ್ರಶಸ್ತಿ ಹಾಗೂ ಧರ್ಮ ಸಮಾರಂಭ ನಡೆಯಲಿದ್ದು, ಸಾನಿಧ್ಯವನ್ನು ಶ್ರೀಶೈಲ ಜಗದ್ಗುರುಗಳಾದ ಡಾ|| ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಜಿಗಳು ವಹಿಸಲಿದ್ದು ನೆತೃತ್ವವನ್ನು ಚಂದ್ರಶೇಖರ ಶಿವಾಚಾರ್ಯ ಸ್ವಾಮಿಜಿಗಳು ಅಭಿನವ ಸಿದ್ದಾರೂಢ ಸ್ವಾಮಿಜಿಗಳು, ಚಂದ್ರಶೇಖರ ಶಿವಾಚಾರ್ಯ ಸ್ವಾಮಿಜಿಗಳು ಅಲಮೆಲ, ಪ್ರಭುದೆವ ಶಿವಾಚಾರ್ಯ ಸ್ವಾಮಿಜಿಗಳು, ಸಿದ್ದನಂದೇಶ್ವರ ಶಿವಾಚಾರ್ಯ ಸ್ವಾಮಿಜಿಗಳು , ಪಶುಪತಿ ಶೀವಾನಂದ ಶಿವಾಚಾರ್ಯ ಸ್ವಾಮಿಜಿಗಳು, ಈ ಸಮಾರಂಭದ ಅಧ್ಯಕ್ಷತೆಯನ್ನು ಉಪಮುಖ್ಯಮಂತ್ರಿಗಳಾದ ಗೋವಿಂದ ಕಾರಜೋಳ ವಹಿಸಲಿದ್ದು, ಕೇಂದ್ರ ರೈಲ್ವೆ ಸಚಿವರಾದ ಸುರೇಶ ಅಂಗಡಿ ದೀಪ ಪ್ರಜ್ವಲನೆ ಮಾಡಲಿದ್ದಾರೆ.
ಅತಿಥಿಯಾಗಿ ಸಂಸದ ಅಣ್ಣಾಸಾಹೇಬ ಜೊಲ್ಲೆ, ಮಾಜಿ ಸಂಸದ ಪ್ರಕಾಶ ಹುಕ್ಕೇರಿ, ಬಾಗಲಕೋಟ ಶಾಸಕ ವಿರಣ್ಣ ಚರಂತಿಮಠ, ರಾಯಬಾಘ ಶಾಸಕ ದುರ್ಯೋಧನ ಐಹೋಳೆ, ಕಾಗವಾಡ ಶಾಸಕ ಶ್ರೀಮಂತ ಪಾಟೀಲ, ಮಾಜಿ ಸಂಸದ ರಮೇಶ ಕತ್ತಿ ಆಗಮಿಸಲಿದ್ದಾರೆ.
ಶನಿವಾರ ದಿ ೨೫ ರಂದು ಮುಂಜಾನೆ೧೦.೩೦ ಗಂಟೆಗೆ ವಿಶ್ವಚೇತನ ಪ್ರಶಸ್ತಿ ಪ್ರಧಾನ, ಗೋಕೈಲಾಸ ಉದ್ಘಾಟನೆ, ನೆರೆ ಸಂತ್ರಸ್ತರ ಗೃಹ ನಿರ್ಮಾಣ ಕಾಮಗಾಋಇಗೆ ಚಾಲನೆ ಹಾಗೂ ನೂತನ ಯಾತ್ರಿ ನಿವಾಸ ಅಡಿಗಲ್ಲು ಸಮಾರಂಭ ಶ್ರೀಶೈಲ ಪೀಠದ ಸ್ವಾಮೀಜಿಗಳ ನೇತೃತ್ವದಲ್ಲಿ ಒಡೆಯರ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮಿಜಿಗಳು ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ದೀಪ ಬೆಳಗಿಸಲಿದ್ದು ಅಧ್ಯಕ್ಷತೆಯನ್ನು ರಾಜ್ಯಸಭಾಸದಸ್ಯ ಡಾ.ಪ್ರಭಾಕರ ಕೋರೆ ವಹಿಸಲಿದ್ದಾರೆ. ನೂತನ ಯಾತ್ರಿ ನಿವಾಸ ಅಡಿಗಲ್ಲನ್ನು ಸಚಿವೆ ಶಶಿಕಲಾ ಜೊಲ್ಲೆ ಇಡಲಿದ್ದು, ಗೋಕೈಲಾಸ ಲೋಕಾರ್ಪಣೆಯನ್ನು ಸಚಿವ ಪ್ರಭು ಚವ್ಹಾಣ ಮಾಡಲಿದ್ದಾರೆ. ನೆರೆ ಸಂತ್ರಸ್ತರ ಗೃಹ ನಿರ್ಮಾಣ ಕಾಮಗಾರಿಗೆ ಬಿಜೆಪಿ ಯುವ ಮುಖಂಡ ಬಿ.ವಾಯ್.ರಾಘವೇಂದ್ರ ಚಾಲನೆ ನೀಡಲಿದ್ದಾರೆ. ಈ ಕಾರ್ಯಕ್ರಮಕ್ಕೆ ಶಾಸಕರಾದ ಮಹಾಂತೇಶ ಕವಟಗಿಮಠ, ಉಮೇಶ ಕತ್ತಿ, ರಮೇಶ ಜಾರಕಿಹೋಳಿ, ಮಹೇಶ ಕುಮಟಳ್ಳಿ, ಪಿ.ರಾಜು, ವಿ.ಎಸ್.ಪಾಟೀಲ, ಅಮಿತ ಕೋರೆ, ಶ್ರೀಶೈಲ ಮಠದ ಆಡಳಿತ ಅಧಿಕಾರಿ ರಾಮಚಂದ್ರನ ಶ್ರೀಶೈಲಿನ ಮಲ್ಲಯ್ಯಾ ಸ್ವಾಮಿ, ರುದ್ರಯ್ಯಾ ಸ್ವಾಮಿ, ವಿಶೇ ಆವ್ಹಾನಿತರಾಗಿ ಭಾರತದ ಯುವ ವಿಜ್ಞಾನಿ ಡ್ರೋಣ ಪ್ರತಾಪ ಎನ್.ಎಮ್. ಆಗಮಿಸಲಿದ್ದಾರೆ.
ಸಾಯಂಕಾಲ ೪ ಗಂಟೆಗೆ ವೀರಭದ್ರೇಶ್ವರ ಮಹಾರಥೋತ್ಸವವನ್ನು ಶ್ರೀಶೈಲ ಜಗದ್ಗುರುಗಳ ದಿವ್ಯ ಸಾನಿಧ್ಯದಲ್ಲಿ ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮಿಗಳ ಹಸ್ತದಿಂದ ರಥೋತ್ಸವ ಕ್ಕೆ ಚಾಲನೆ ನೀಡಲಿದ್ದಾರೆ ಈ ವೇಳೇ ಗೌರಿಶಂಕ ಶಿವಾಚಾರ್ಯ ಸ್ವಾಮಿಗಳು ಜಮಖಂಡಿ, ಉಮೇಶ್ವರ ಶಿವಾಚಾರ್ಯ ಸ್ವಾಮಿಗಳು ಹೂಲಿ, ಶರಣಬಸವ ಶಿವಾಚಾರ್ಯ ಸ್ವಾಮಿಗಳು ಬನಹಟ್ಟಿ, ಗುರುಶಾಮತಲಿಂಗ ದೇಶಿಕೇಂದ್ರ ಶಿವಾಚಾರ್ಯ ಸ್ವಾಮಿಗಳು ಮಾಂಜರಿ, ಈಶ್ವರ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು ಅಂಬಿಕಾನಗರ, ರೇಣುಕಾ ಶಿವಾಚಾರ್ಯ ಸ್ವಾಮಿಗಳು ಜೈನಾಪೂರ, ಸಿದ್ದೇಶ್ವರ ಶಿವಾಚಾರ್ಯ ಸ್ವಾಮಿಗಳು ಉ.ಖಾನಾಪೂರ, ರೇವಣಸಿದ್ದ ಶಿವಾಚಾರ್ಯ ಸ್ವಾಮಿಗಳು ಕಬ್ಬೂರ, ಶಿವಲಿಂಗ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು ಜಮಖಂಡಿ, ಗುರುಶಾಂತಲಿಂಗ ಶಿವಾಚಾರ್ಯ ಸ್ವಾಮಿಗಳು ಇಟಗಿ, ಗುರುಸೇವಾ ಸೂರ್ಯ ಶಿವಕುಮಾರ ಸ್ವಾಮಿಗಳು ಕರಬಂಟನಾಳ ಹಾಜರಿರಲಿದ್ದಾರೆ ಈ ಮೂರುದಿನಗಳ ವಿಶಾಳಿ ಜಾತ್ರಾ ಮಹೋತ್ಸವದಲ್ಲಿ ನೀಲಮಾಣ ಕಮಠ ಬಂಡಿಗಣ ಯ ದಾಸೋಹರತ್ನ ಚಕ್ರವರ್ತಿ ದಾನೇಶ್ವರ ಸ್ವಾಮೀಜಿಗಳು ದಾಸೋಹ ಸೇವೆ ಮಾಡಲಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ