Kannada NewsKarnataka NewsLatest

ಖಾನಾಪುರ: ತಂದೆ ಹುಟ್ಟುಹಬ್ಬದಂದು ಮಗ ಆತ್ಮಹತ್ಯೆ ಮಾಡಿಕೊಂಡಿದ್ದೇಕೆ?

ಪ್ರಗತಿವಾಹಿನಿ ಸುದ್ದಿ, ಖಾನಾಪುರ: ಮೊಬೈಲ್ ಕೊಡಿಸಲಿಲ್ಲವೆಂಬ ಕಾರಣಕ್ಕೆ ಮಗನೊಬ್ಬ ತಂದೆಯ ಹುಟ್ಟುಹಬ್ಬದ ದಿನವೇ ಆತ್ಮಹತ್ಯೆಗೆ ಶರಣಾಗುವ ಮೂಲಕ ಸಂಭ್ರಮದ ಮನೆಯನ್ನು ಶೋಕಕ್ಕೆ ತಳ್ಳಿದ್ದಾನೆ.

ಇಲ್ಲಿನ ಹಲಕರ್ಣಿಯ ಅಂಬೇಡ್ಕರ ಬೀದಿಯ ಬಾಲಕ ಪ್ರಥಮೇಶ ರಾಜು ಕೋಳಿ(17) ನೇಣು ಮಂಗಳವಾರ ಮಧ್ಯಾಹ್ನ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ.

Home add -Advt

ಮರಾಠಾ ಮಂಡಲ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಯಾಗಿದ್ದ ಪ್ರಥಮೇಶ ಮೊಬೈಲ್ ಕೊಡಿಸುವಂತೆ ಎರಡು  ದಿನಗಳಿಂದ ತಂದೆ ತಾಯಿ ಬಳಿ ಹಠ ಹಿಡಿದಿದ್ದ. ಒಂದೆರಡು ದಿನ ಮನೆಯಲ್ಲಿರುವ ಹಳೆಯ ಫೋನ್ ಬಳಸುವಂತೆ ಹಾಗೂ ಹೊಸ ಫೋನ್ ಕೊಡಿಸುವುದಾಗಿ ಪಾಲಕರು ಹೇಳಿದ್ದರೆನ್ನಲಾಗಿದೆ.

ಇಲ್ಲಿನ ಲೋಕ ಸೇವಾ ಸೊಸೈಟಿಯಲ್ಲಿ ಪಿಗ್ಮಿ ಕಲೆಕ್ಟರ್ ಆಗಿ ಕೆಲಸ ಮಾಡುತ್ತಿರುವ ತಂದೆ ರಾಜು ಕೋಳಿಯವರ ಜನ್ಮದಿನ ಮಂಗಳವಾರ ಆಚರಿಸಿಕೊಳ್ಳುತ್ತಿದ್ದು ಇದೇ ವೇಳೆ ಫೋನ್ ಕೊಡಿಸಲಿಲ್ಲವೆಂಬ ಖಿನ್ನತೆಯಿಂದ ಪ್ರಥಮೇಶ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. 

ಈ ವೇಳೆ ರಾಜು ಕೋಳಿಯವರು ಕರ್ತವ್ಯದ ಮೇಲೆ ತೆರಳಿದ್ದು ಅವರ ಪತ್ನಿ ಹೊಲದ ಕೆಲಸಕ್ಕೆ ಹೋಗಿದ್ದರು. ಮಧ್ಯಾಹ್ನ ಊಟಕ್ಕೆ ಬಂದಿದ್ದ ರಾಜು ಕೋಳಿಯವರು ಮಗ ನೇಣು ಬಿಗಿದುಕೊಂಡು ಆತ್ಮಹತ್ಯೆಗೈದಿರುವುದನ್ನು ಕಂಡು ಹೌಹಾರಿದ್ದಾರೆ.

ಈ ಕುರಿತು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

ಅಧಿಕಾರಿಗಳು, ಪಿಡಿಒಗಳ ವಿರುದ್ಧ ಶಾಸಕ ಬಾಲಚಂದ್ರ ಜಾರಕಿಹೊಳಿ ಕೆಂಡ

Related Articles

Back to top button