Kannada NewsKarnataka News

ಸಂತ್ರಸ್ತರಿಗೆ ಪರಿಹಾರ ವಿತರಿಸಿದ ಯುವಕಾಂಗ್ರೆಸ್, ಲಕ್ಷ್ಮಿತಾಯಿ ಫೌಂಡೇಶನ್

 ಸಂತ್ರಸ್ತರಿಗೆ ಪರಿಹಾರ ವಿತರಿಸಿದ ಯುವಕಾಂಗ್ರೆಸ್, ಲಕ್ಷ್ಮಿತಾಯಿ ಫೌಂಡೇಶನ್

 

Home add -Advt

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ –

ಲಕ್ಷ್ಮಿ ತಾಯಿ ಫೌಂಡೇಶನ್ ಹಾಗೂ ಯುವಕಾಂಗ್ರೆಸ್ ನಿಂದ ಬೆಳಗಾವಿಯ ವಿವಿಧೆಡೆ ಸಂತ್ರಸ್ತರಿಗೆ ಪರಿಹಾರ ವಿತರಣೆ  ಮಾಡಲಾಯಿತು.

ಯುವಕಾಂಗ್ರೆಸ್ ರಾಜ್ಯಾಧ್ಯಕ್ಷ ಬಸನಗೌಡ ಬಾದರ್ಲಿ ಹಾಗೂ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಪುತ್ರ, ಯುವಕಾಂಗ್ರೆಸ್ ಮುಖಂಡ ಮೃಣಾಲ್ ಹೆಬ್ಬಾಳಕರ್ ನೇತೃತ್ವದಲ್ಲಿ ಅಂಕಲಗಿ, ರಾಜಹಂಸಗಡ ಹಾಗೂ ಸುಳಗಾ ಪ್ರದೇಶದಲ್ಲಿ ಸಂತ್ರಸ್ತರಿಗೆ ಬಟ್ಟೆ ಹಾಗೂ ವಿವಿಧ ಸಾಮಗ್ರಿಗಳನ್ನು ವಿತರಣೆ ಮಾಡಲಾಯಿತು.

ಯುವಕಾಂಗ್ರೆಸ್ ನಿಂದ ಕೂಡ ಎಲ್ಲೆಡೆ ಸಮೀಕ್ಷೆ ನಡೆಸಿ, ಪ್ರವಾಹದಿಂದ ಆಗಿರುವ ನಷ್ಟಕ್ಕೆ ಪರಿಹಾರ ನೀಡುವಂತೆ ರಾಜ್ಯ ಸರಕಾರದ ಮೇಲೆ ಒತ್ತಡ ಹೇರಲಾಗುವುದೆಂದು ಬಾದರ್ಲಿ ಹಾಗೂ ಮೃಣಾಲ್ ತಿಳಿಸಿದರು.

ಸಂತ್ರಸ್ತರು ಯಾವುದೇ ಕಾರಣದಿಂದ ಧೈರ್ಯಗುಂದುವುದು ಬೇಡ. ಲಕ್ಷ್ಮಿ ತಾಯಿ ಫೌಂಡೇಶನ್ ಹಾಗೂ ಯುವಕಾಂಗ್ರೆಸ್ ಅವರ ಜೊತೆಗಿರುತ್ತದೆ ಎಂದು ಧ್ಯೈರ್ಯ ಹೇಳಲಾಯಿತು.

Related Articles

Back to top button