Latest

ಗೋವಾ ಬಳಿ ಅಪಘಾತ: ಕಾರವಾರದ ನಾಲ್ವರ ಸಾವು

ಪ್ರಗತಿವಾಹಿನಿ ಸುದ್ದಿ, ಕಾರವಾರ:

ಕಾರು ಮತ್ತು ಲಾರಿ ಮಧ್ಯೆ ನಡೆದ ಅಪಘಾತದಲ್ಲಿ ಕಾರವಾರದ ನಾಲ್ವರು ಮೃತಪಟ್ಟಿದ್ದಾರೆ.

Home add -Advt

ಗೋವಾದ ಕಾನ್‍ಕೊಲಿಮ್ ಸಮೀಪ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತ ನಡೆದಿದೆ. ಕಾರಿನಲ್ಲಿ ಪ್ರಯಾಣಿಸುತ್ತಿದ್ದ, ಗಂಡ, ಹೆಂಡತಿ, ಆರು ತಿಂಗಳ ಮಗು ಮತ್ತು ಚಾಲಕ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಗೋವಾ ವಿಮಾನ ನಿಲ್ದಾಣದಿಂದ ಕಾರವಾರಕ್ಕೆ ಬರುತ್ತಿರುವಾಗ ಈ ಅಪಘಾತ ನಡೆದಿದೆ. ಅಪಘಾತದ ರಭಸಕ್ಕೆ ಲಾರಿ ರಸ್ತೆ ಬದಿಯಲ್ಲಿರುವ ಹೊಂಡಕ್ಕೆ ಇಳಿದರೆ, ಕಾರಿನ (ಕೆಎ02-ಎಮ್‍ಡಿ 8957) ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Related Articles

Back to top button