Latest

*ಹಿರಿಯ ನಾಗರಿಕರನ್ನು ಅನಾಥವಾಗಿಸುವ ಮುನ್ನ ಇರಲಿ ಎಚ್ಚರ*: *ರಾಜ್ಯದಲ್ಲಿ ಕಠಿಣ ಕಾನೂನು ಜಾರಿ*

ಹಿರಿಯ ನಾಗರಿಕರನ್ನು ನಿರ್ಲಕ್ಷ್ಯ ಮಾಡಿ ಅನಾಥರನ್ನಾಗಿ ಮಾಅಡುವ ಮುನ್ನ ಜನರಲ್ಲಿ ಎಚ್ಚರಿಕೆ ಇರಲಿ. ಹಿರಿಯ ನಾಗರಿಕರ ಮೇಲಿನ ದೌರ್ಜನ್ಯ ಹಾಗೂ ನಿರ್ಲಕ್ಷ ತಪ್ಪಿಸಲು ರಾಜ್ಯ ಸರ್ಕಾರ ಹೊಸ ಮಸೂದೆಯನ್ನು ಸಿದ್ಧಪಡಿಸಿದೆ.

ಕರ್ನಾಟಕ ಹಿರಿಯ ನಾಗರಿಕರ ಮೇಲಿನ ದೌರ್ಜನ್ಯ ಮತ್ತು ನಿರ್ಲಕ್ಷ್ಯ ತಡೆ ಹಾಗೂ ರಕ್ಷಣಾ ಮಸೂದೆ-2025ರ ಕರಡನ್ನು ಪರಿಶೀಲಿಸಿರುವ 12 ಸದಸ್ಯರ ತಜ್ಞರ ಸಮಿತಿಯ, ಹಿರಿಯ ನಾಗರಿಕರನ್ನು ತ್ಯಜಿಸುವುದನ್ನು ಜಾಮೀನು ಸಿಗದ ಅಪರಾಧವನ್ನಾಗಿ ಪರಿಗಣಿಸಿ ಮೂರು ವರ್ಷಗಳ ಜೈಲು ಶಿಕ್ಷೆ ವಿಧಿಸುವಂತೆಯೂ ಶಿಫಾರಸು ಮಾಡಿದೆ.

ಹಿರಿಯ ನಾಗರಿಕರನ್ನು ಅನಾಥವಾಗಿಸುವ ಪ್ರಕರಣಗಳಲ್ಲಿ 2 ವರ್ಷಗಳ ಜೈಲು ಶಿಕ್ಷೆ ಹಾಗೂ 1 ಲಕ್ಷ ರೂ. ದಂಡ ವಿಧಿಸಲು ಮಸೂದೆಯಲ್ಲಿ ಪ್ರಸ್ತಾಪಿಸಲಾಗಿದೆ.

Related Articles

Back to top button