ಪ್ರಗತಿವಾಹಿನಿ ಸುದ್ದಿ, ಮಲ್ಲಮ್ಮನ ಬೆಳವಡಿ
ಇಂದಿನ ಒತ್ತಡದ ಜೀವನಶೈಲಿ ಮತ್ತು ಆರೋಗ್ಯದ ಬಗ್ಗೆ ಇರುವ ನಿರ್ಲಕ್ಷ್ಯದಿಂದ ಜನ ಸಣ್ಣ ವಯಸ್ಸಿನಲ್ಲೇ ನಾನಾ ಖಾಯಿಲೆಗಳಿಗೆ ತುತ್ತಾಗಿ ಆರೋಗ್ಯ ಹಾಳು ಮಾಡಿಕೊಳ್ಳುತ್ತಿದ್ದಾರೆ ಎಂದು ಬೈಲಹೊಂಗಲ ಮಾಜಿ ಶಾಸಕ ಡಾ.ವಿಶ್ವನಾಥ ಪಾಟೀಲ ಕಳವಳ ವ್ಯಕ್ತಪಡಿಸಿದರು.
ಮಲ್ಲಮ್ಮನ ಬೆಳವಡಿಯ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಸಾರ್ವಜನಿಕರಿಗಾಗಿ ಇಲ್ಲಿನ ವಿಆರ್‌ಎಮ್‌ಎಸ್ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಬೆಳಗಾವಿಯ ವಿಜಯ ಆಸ್ಪತ್ರೆ ಹಾಗೂ ಈಶಪ್ರಭು ಶಿಕ್ಷಣ ಸಂಸ್ಥೆಗಳ ಸಹಯೋಗದಲ್ಲಿ ಮಂಗಳವಾರ ಆಯೋಜಿಸಲಾಗಿದ್ದ ಆರೋಗ್ಯ ಜಾಗೃತಿ ಅಭಿಯಾನ ಹಾಗೂ ವಿಶೇಷ ಆರೋಗ್ಯ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.
ಸಾರ್ವಜನಿಕರು ದೂರದ ನಗರಗಳಲ್ಲಿನ ಆಸ್ಪತ್ರೆಗಳಿಗೆ ತೆರಳಿ ಸಾಕಷ್ಟು ಹಣ ಖರ್ಚು ಮಾಡದೇ ಸ್ವಂತ ಗ್ರಾಮದಲ್ಲಿಯೇ ಏರ್ಪಡಿಸಲಾಗುವ ಆರೋಗ್ಯ ಶಿಬಿರಗಳ ಪ್ರಯೋಜನ ಪಡೆಯಬೇಕೆಂದರು.
ವಿಜಯ ಆಸ್ಪತ್ರೆಯ ನಿರ್ದೇಶಕರಾದ ಡಾ.ಪ್ರಕಾಶ ಪಾಟೀಲ ಮಾತನಾಡಿ ಉಚಿತ ಆರೋಗ್ಯ ಶಿಬಿರಗಳ ಬಗ್ಗೆ ಜನರಿಗಿರುವ ನಕಾರಾತ್ಮಕ ಭಾವನೆ ದೂರವಾಗಬೇಕು. ಜನರ ಹಣ ಮತ್ತು ಸಮಯದ ಉಳಿತಾಯಕ್ಕಾಗಿ ಆಯೋಜಿಸುವ ಆರೋಗ್ಯ ಶಿಬಿರಗಳ ಸದುಪಯೋಗವಾಗಬೇಕೆಂದರು.
ಈಶಪ್ರಭು ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಎಮ್ ಎಮ್ ಕಾಡೇಶನವರ ಮಾತನಾಡಿದರು. ನಿರ್ದೇಶಕರಾದ ಎನ್ ಎಮ್ ಕರೀಕಟ್ಟಿ, ವಿ ಎಸ್ ಬಳಿಗಾರ, ಪ್ರಸಾದ ಕಾರಿಮನಿ, ಅಶೋಕ ಮಾರಿಹಾಳ, ಎಮ್ ಜಿ ರೊಟ್ಟಯ್ಯನವರಮಠ, ಗ್ರಾಪಂ ಸದಸ್ಯರಾದ ಮಡ್ಡೆಪ್ಪ ಹುಂಬಿ, ಪ್ರಚಾರ್ಯ ಎನ್ ಸಿ ಯರಗಂಬಳಿಮಠ ಉಪಸ್ಥಿತರಿದ್ದರು.
ಬೆಳವಡಿ ಹಾಗೂ ಸುತ್ತಲಿನ ಗ್ರಾಮಗಳ ಸಾರ್ವಜನಿಕರು ಆರೋಗ್ಯ ತಪಾಸಣೆಗಾಗಿ ಪಾಲ್ಗೊಂಡಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ