Latest

ಓಂ ಬೀಚಿನಲ್ಲಿ ಬೆಳಗಾವಿಯ 4 ಪ್ರವಾಸಿಗರ ಜೀವರಕ್ಷಣೆ

 

Home add -Advt

ಪ್ರಗತಿವಾಹಿನಿ ಸುದ್ದಿ, ಗೋಕರ್ಣ

ಪ್ರವಾಸಕ್ಕೆ ತೆರಳಿ ಜೀವಾಪಾಯಕ್ಕೆ ಸಿಲುಕಿದ್ದ ನಾಲ್ವರನ್ನು ಗೋಕರ್ಣದಲ್ಲಿ ರಕ್ಷಿಸಲಾಗಿದೆ.

ಬೆಳಗಾವಿ ಮೂಲದ ಕುಟುಂಬವೊಂದು ಗೋಕರ್ಣ ಪ್ರವಾಸಕ್ಕೆಂದು ಬಂದಿದ್ದು, ಓಂ ಬೀಚ್ ಕಡಲ ತೀರ ಸ್ನಾನಕ್ಕೆ ತೆರಳಿದ್ದಾಗ ಅಪಾಯಕ್ಕೆ ಸಿಲುಕಿತ್ತು.

ಬಾಲಕ ಹುಸೈನ್ (14 )ಎನ್ನುವಾತ ಸಮುದ್ರ ಸುಳಿಗೆ ಸಿಲುಕಿದ್ದಾನೆ. ಅದನ್ನು ನೋಡಿದ ಕುಟುಂಬದವರು ಸಹಝಾದ(೨೬), ಅಬ್ದುಲ್ಲಾ(೨೦), ಬೇಪರಿ (೪೨)  ರಕ್ಷಣೆಗೆ ಹೋಗಿ ಅವರು ಕೂಡ ಸುಳಿಗೆ ಸಿಲುಕಿದರು. ಅದನ್ನು ಗಮನಿಸಿದ ಲೈಫ್ ಗಾರ್ಡ್ ಸಿಬ್ಬಂದಿಗಳಾದ ಪಾಂಡುರಂಗ ಅಂಬಿಗ, ಪ್ರಭಾಕರ ಅಂಬಿಗ ತಕ್ಷಣ ರಕ್ಷಣೆಗೆ ಧಾವಿಸಿ ಪ್ರವಾಸಿಗರನ್ನು ರಕ್ಷಣೆ ಮಾಡಿದ್ದಾರೆ.  ಪ್ರವಾಸಿ ಮಿತ್ರ ಸತೀಶ್ ನಾಯ್ಕ್ ಎನ್ನುವವರು ಸಹ ಸಹಾಯ ಮಾಡಿದರು.

Related Articles

Back to top button