ಪ್ರಗತಿವಾಹಿನಿ ಸುದ್ದಿ, ಕಾರವಾರ
ಕಾರವಾರ ಸಮೀಪ ಅರಬ್ಬಿ ಸಮುದ್ರದಲ್ಲಿ ದೋಣಿ ಮುಳುಗಿ ಕೂರ್ಮಗಡ ದ್ವೀಪದಲ್ಲಿ ಜಾತ್ರೆ ಮುಗಿಸಿ ವಾಪಸ್ಸಾಗುತ್ತಿದ್ದಕೊಪ್ಪಳದ ಒಂದೇ ಕುಟುಂಬದ 4 ಜನ ಸೇರಿದಂತೆ 8 ಜನರು ಸಾವನ್ನಪ್ಪಿದ್ದಾರೆ.
ಸಮುದ್ರದ ನಡುಗಡ್ಡೆಯಲ್ಲಿರುವ ಕೂರ್ಮಗಡದ ನರಸಿಂಹ ದೇವರ ಜಾತ್ರೆ ಪ್ರತಿ ವರ್ಷ ಜ.21ರಂದು ನಡೆಯುತ್ತದೆ. ಸೋಮವಾರ ಜಾತ್ರೆಗೆ ಹೋಗಿ ವಾಪಸ್ ಬರುತ್ತಿದ್ದಾಗ ದೋಣಿ ಮಗುಚಿದೆ. ಕಾರವಾರದಿಂದ 6 ಕಿಮೀ ದೂರದಲ್ಲಿ ಘಟನೆ ನಡೆದಿದೆ. ದೋಣಿಯಲ್ಲಿ ಒಟ್ಟೂ 22 ಜನರಿದ್ದರು ಎನ್ನಲಾಗಿದ್ದು, ಇನ್ನಷ್ಟು ಜನರಿಗಾಗಿ ಶೋಧ ನಡೆಯುತ್ತಿದೆ. ದೋಣಿ ದೇವಭಾಗದ ಗಿರಿಧರ ಎಂಬುವವರಿಗೆ ಸೇರಿದ್ದು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ