ಪ್ರಗತಿವಾಹಿನಿ ಸುದ್ದಿ, ಬೆಳಗಾವಿ
ಬೆಳಗಾವಿ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ಎಮ್ಮೆ ಹಾಲನ್ನು ಮಾರುಕಟ್ಟೆಗೆ ತರುತ್ತಿದ್ದು, ಶನಿವಾರ ಬಿಡುಗಡೆ ಮಾಡಲಿದೆ.
ಶನಿವಾರ ಬೆಳಿಗ್ಗೆ 10.30ಕ್ಕೆ ಬೆಳಗಾವಿ ಹಾಲು ಒಕ್ಕೂಟದ ಆವರಣದಲ್ಲಿ ನಂದಿನಿ ಯು.ಹೆಚ್.ಟಿ. ಎಮ್ಮೆ ಹಾಲನ್ನು ವಿಧಾನ ಪರಿಷತ್ ಸದಸ್ಯರು ಹಾಗೂ ಒಕ್ಕೂಟದ ಅಧ್ಯಕ್ಷರು ಆದ ವಿವೇಕ ವ್ಹಿ ಪಾಟೀಲ ಬಿಡುಗಡೆ ಮಾಡುವರು. ಕಾರ್ಯಕ್ರಮದಲ್ಲಿ ಒಕ್ಕೂಟದ ಆಡಳಿತ ಮಂಡಳಿ ಸದಸ್ಯ ಮತ್ತು ನಿರ್ದೇಶಕ ಎಂ.ಟಿ.ಕುಲಕರ್ಣಿ ಉಪಸ್ಥಿತರಿರುವರು ಎಂದು ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ಉಬೇದುಲ್ಲಾ ಖಾನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಯು.ಹೆಚ್.ಟಿ. ಎಮ್ಮೆ ಹಾಲನ್ನು ಕರ್ನಾಟಕ ಹಾಲು ಮಹಾಮಂಡಳಿ ವತಿಯಿಂದ ಪರಿಚಯಿಸುತ್ತಿದ್ದು, ಬೆಳಗಾವಿ ನಂದಿನಿ ಡೇರಿಯಲ್ಲಿ ತಯಾರಿಸಲಾಗುತ್ತಿದೆ. ಶೇ.6 ಜಿಡ್ಡು ಮತ್ತು ಶೇ.9 ಜಿಡ್ಡೇತರ ಘನ ಪದಾರ್ಥ ಹೊಂದಿದ ಎಮ್ಮೆ ಹಾಲು ಇದಾಗಿದ್ದು, ಹೈನುಗಾರಿಕೆಯ ತಂತ್ರಜ್ಞಾನದ ಬೆಳವಣಿಗೆ ಹಾಗೂ ಹೊಸ ಅವಿಷ್ಕಾರಗಳ ಫಲವಾಗಿ ಹಾಲನ್ನು ಶ್ಯಾಚೆಯಲ್ಲಿ ತುಂಬಿ ವಾತಾವರಣದ ತಾಪಮಾನದಲ್ಲಿ ಮೂರು ತಿಂಗಳು ಬಾಳಿಕೆ ಬರುವಂತೆ ಯು.ಹೆಚ್.ಟಿ. ಸಂಸ್ಕರಣೆಯನ್ನು ಅನುಸರಿಸಲಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ