Latest

ಮಹಿಳೆ ಪ್ರಜ್ಞೆ ತಪ್ಪಿಸಿ ಪಾದ್ರಿಯಿಂದ ಅತ್ಯಾಚಾರ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಮಹಿಳೆ ಪ್ರಜ್ಞೆ ತಪ್ಪಿಸಿ ಪಾದ್ರಿಯೊಬ್ಬ ನಿರಂತರವಾಗಿ ಲೈಂಗಿಕ ಕಿರುಕುಳ ನೀಡುತ್ತಿರುವುದಾಗಿ ಆರೋಪಿಸಿ ಸಂತ್ರಸೆಯೊಬ್ಬರು ಪೊಲೀಸ್ ಠಾಣೆ ಮೆಟ್ಟಿಲೇರಿರುವ ಘಟನೆ ಸೋಲದೇವನಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಎರಡು ವರ್ಷಗಳ ಹಿಂದೆ ಬೆಂಗಳೂರಿನ ಉತ್ತರ ತಾಲೂಕಿನ ಹೆಸರಘಟ್ಟ ಕೆರೆ ಬಳಿ ನಡೆದ ಘಟನೆ ಇದಾಗಿದ್ದು, ಇದೀಗ ವಕೀಲೆಯೊಬ್ಬರ ಸಹಾಯದಿಂದಾಗಿ ಸಂತ್ರಸ್ತ ಮಹಿಳೆ ಪಾದ್ರಿ ಅಲ್ಬರ್ಟ್ ಎಂಬುವವರ ವಿರುದ್ಧ ದೂರು ದಾಖಲಿಸಿದ್ದಾರೆ.

Home add -Advt

ಜಿಸಸ್ ರಕ್ತ ಇದನ್ನು ಕುಡಿದರೆ ಒಳ್ಳೆಯದಾಗುತ್ತದೆ ಎಂದು ನಂಬಿಸಿ ಪ್ರಜ್ಞೆ ತಪ್ಪಿಸಿ ಕೃತ್ಯವೆಸಗಲಾಗಿದೆ ಎಂದು ದೂರು ನೀಡಲಾಗಿದೆ. ವಕೀಲೆಯೊಬ್ಬರ ಸಹಾಯದಿಂದ ಮಹಿಳೆ ಸೋಲದೇವನಹಳ್ಳಿ ಠಾಣೆಯಲ್ಲಿ ದೂರು ನೀಡಿದ್ದಾರೆ ಎಂದು ತಿಳಿದುಬಂದಿದೆ.
ಶಾಸಕ ನೆಹರು ಓಲೇಕಾರ್ ಮೊಮ್ಮಕ್ಕಳು ಆತ್ಮಹತ್ಯೆಗೆ ಶರಣು

Related Articles

Back to top button