Latest

ನಕ್ಸಲ್ ಗುಂಡಿಗೆ ಬಲಿಯಾದ ಯೋಧ ರಾಹುಲ್ ಶಿಂಧೆ ಅಂತ್ಯಕ್ರಿಯೆ

ಪ್ರಗತಿವಾಹಿನಿ ಸುದ್ದಿ, ಖಾನಾಪುರ
ಪಶ್ಚಿಮ ಬಂಗಾಳದಲ್ಲಿ ಕರ್ತವ್ಯದಿಂದ ಮರಳುವಾಗಿ ನಕ್ಸಲರ ಗುಂಡಿಗೆ ಬಲಿಯಾಗಿರುವ ಯೋಧ ರಾಹುಲ್ ವಸಂತ ಶಿಂಧೆ ಅಂತ್ಯಕ್ರಿಯೆ ಖಾನಾಪುರ ತಾಲೂಕಿನ ನಾವಗಾ ಗ್ರಾಮದಲ್ಲಿ ಮಂಗಳವಾರ ಸಕಲ‌ ಸರ್ಕಾರಿ ಗೌರವಗಳೊಂದಿಗೆ ಸಂಪನ್ನಗೊಂಡಿತು.
ಅಂತ್ಯಕ್ರಿಯೆಯಲ್ಲಿ ಜಿಲ್ಲಾಧಿಕಾರಿ ಎಸ್.ಬಿ. ಬೊಮ್ಮನಹಳ್ಳಿ, ಜಿಲ್ಲಾ ಪಂಚಾಯಿತಿ ಸಿಇಒ ರಾಜೇಂದ್ರ ಕೆ.ವಿ., ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಧೀರಕುಮಾರ್ ರೆಡ್ಡಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಜನಪ್ರತಿನಿಧಿಗಳು, ನಾಗರಿಕರು ಭಾಗವಹಿಸಿದ್ದರು.
ಸಾವಿರಾರು ಸಂಖ್ಯೆಯಲ್ಲಿ ರಾಹುಲ್ ಅಭಿಮಾನಿಗಳು ಹಾಜರಿದ್ದು ರಾಹುಲ್ ಶಿಂಧೆ ಅಮರ್ ರಹೇ ಎಂದು ಘೋಷಣೆಯನ್ನು ಕೂಗಿದರು. ಪೊಲೀಸರು ಮತ್ತು ಬಿ.ಎಸ್.ಎಫ್ ಯೋಧರು ಗಾಳಿಯಲ್ಲಿ ಗುಂಡು ಹಾರಿಸಿ ವೀರಯೋಧನಿಗೆ ಅಂತಿಮ‌ ನಮನ ಸಲ್ಲಿಸಿದರು.

Related Articles

Back to top button