Latest

ನೀರು ಬಿಡದ ಮಹಾರಾಷ್ಟ್ರ: ಡಿಕೆಶಿ ಅಸಮಧಾನ, ಹಿಡಕಲ್ ನೀರು ಬಿಡುಗಡೆ ಆದೇಶ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ:

ಮಹಾರಾಷ್ಟ್ರ ಸರಕಾರದೊಂದಿಗೆ ಸಾಕಷ್ಟು ಮಾತುಕತೆ ನಡೆಸಿದರೂ ಏನೂ ಪ್ರಯೋಜನವಾಗುತ್ತಿಲ್ಲ ಎಂದು ರಾಜ್ಯ ಜಲಸಂಪನ್ಮೂಲ ಸಚಿವ ಡಿ. ಕೆ. ಶಿವಕುಮಾರ ಖೇದ ವ್ಯಕ್ತಪಡಿಸಿದ್ದಾರೆ. 

Home add -Advt

 ಕುಡಿಯಲು ಕೊಯ್ನಾ ಜಲಾಶಯದಿಂದ ಕೃಷ್ಣಾ ನದಿಗೆ ನೀರು ಹರಿಸುವಂತೆ  ಮಹಾರಾಷ್ಟ್ರ ಸರಕಾರಕ್ಕೆ ಹಲವು ಬಾರಿ ಕೋರಿದ್ದೇವೆ. ಆದರೆ ಮಹಾರಾಷ್ಟ್ರ ಸರಕಾರ ನೀರಿಗೆ ನೀರು ಎನ್ನುತ್ತಿದೆ. ಜೊತೆಗೆ ಇನ್ನೂವರೆಗೂ ನೀರು ಬಿಡುವ ಮನಸ್ಸು ಮಾಡುತ್ತಿಲ್ಲ. ಅಲ್ಲಿನ ಸಿಎಂ ಮಾತು ಕೊಟ್ಟಿದ್ದರು, ಒಪ್ಪಂದವೂ ಆಗಿತ್ತು. ಆದರೆ ಫಲಿತಾಂಶ ಶೂನ್ಯವಾಗಿದೆ. ನಮ್ಮ ಅಥಣಿ, ಕಾಗವಾಡ ಭಾಗದ ಜನರ ಕುಡಿಯುವ ನೀರಿಗಾಗಿ ಹಿಡಕಲ್ ಡ್ಯಾಂನಿಂದ 1 ಟಿಎಂಸಿ ನೀರು ಬಿಡಲು ನಮ್ಮ ಅಧಿಕಾರಿಗಳಿಗೆ ಆದೇಶಿಸಿದ್ದೇನೆ ಎಂದು ನುಡಿದರು.

Related Articles

Back to top button