Latest

ಪರೀಕ್ಷೆ ಬರೆದ ನಾಲ್ವರು ನಕಲಿ ವಿದ್ಯಾರ್ಥಿಗಳು

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ:

ಬೇರೆಯವರ ಪರವಾಗಿ ಪರೀಕ್ಷೆ ಬರೆಯುತ್ತಿದ್ದ ನಾಲ್ವರು ಅಪ್ರಾಪ್ತ ಬಾಲಕರ ವಿರುದ್ದ ಪ್ರಕರಣ ದಾಖಲಾಗಿದೆ.

ಬೆಳಗಾವಿಯ ಡಿವೈನ್ ಪ್ರೊವಿಡನ್ಸ್ ಶಾಲಾ ಪರೀಕ್ಷೆ ಕೇಂದ್ರದಲ್ಲಿ ಈ ಘಟನೆ ನಡೆದಿದೆ.

ವಿದ್ಯಾರ್ಥಿಗಳ ವಿರುದ್ಧ ಟಿಳಕವಾಡಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ.

ಮಾರುತಿ ಕಿಲ್ಲೇದಾರ, ಸೋಮಶೇಖರ ಬಟಕುರ್ಕಿ, ನಾಗರಾಜ ಮೂಗಬಸವ ಹಾಗೂ ಶೆಟ್ಟಪ್ಪ ಉಪ್ಪಾರ ಅವರ ಬದಲಿಗೆ ಖೊಟ್ಟಿ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು.

ಎಲ್ಲರೂ ಅಪ್ರಾರ್ಥರಾಗಿದ್ದರಿಂದ ಬಂಧಿಸಲಾಗಿಲ್ಲ. ಆದರೆ ಪೊಲೀಸ್‌ ದೂರು ದಾಖಲಾಗಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button