ಪ್ರಗತಿವಾಹಿನಿ ಸುದ್ದಿ, ಬೆಳಗಾವಿ
ಪ್ರಧಾನಿ ನರೇಂದ್ರ ಮೋದಿ ಇಂದು ಸಂಜೆ ಹುಬ್ಬಳ್ಳಿಗೆ ಆಗಮಿಸಲಿದ್ದು, ಲೋಕಸಭಾ ಚುನಾವಣೆ ಪ್ರಚಾರ ರ‍್ಯಾಲಿಗೆ ಚಾಲನೆ ನೀಡಲಿದ್ದಾರೆ. ಕರ್ನಾಟಕದಲ್ಲಿ ಇದು ಮೊದಲ ಚುನಾವಣೆ ಪ್ರಚಾರ ಕಾರ್ಯಕ್ರಮವಾಗಲಿದೆ.
ಸಂಜೆ 5 ಗಂಟೆಗೆ ರ‍್ಯಾಲಿ ನಡೆಯಲಿದ್ದು, ಅದಕ್ಕೂ ಮುನ್ನ ಮೋದಿ 1200 ಕೋಟಿ ರೂ. ವೆಚ್ಚದ ಐಐಟಿ ಮೊದಲ ಹಂತದ ಕಟ್ಟಡಕ್ಕೆ, 110 ಕೋಟಿ ರೂ. ವೆಚ್ಚದ ಐಐಐಟಿ ಕಾಲೇಜು ಕಟ್ಟಡಕ್ಕೆ ಶಂಕು ಸ್ಥಾಪನೆ, ಮನೆ ಮನೆಗೆ ಗ್ಯಾಸ್ ಪೈಪ್‌ಲೈನ್ ಸಂಪರ್ಕ ಯೋಜನೆಯಡಿ ನವನಗರದ 500 ಮನೆಗಳಿಗೆ ಕಲ್ಪಿಸಿದ ಗ್ಯಾಸ್ ಸಂಪರ್ಕ ವ್ಯವಸ್ಥೆ ಉದ್ಘಾಟಿಸುವರು. ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ ನಿರ್ಮಿಸಿದ ಮನೆಗಳ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಿಸುವರು.
ಮೋದಿ ಆಗಮನದ ಹಿನ್ನೆಲೆಯಲ್ಲಿ ಹುಬ್ಬಳ್ಳಿ ನಗರ ಸಂಪೂರ್ಣ ಸಜ್ಜಾಗಿದ್ದು, ಎಲ್ಲಿ ನೋಡಿದರೂ ಕೇಸರಿಮಯವಾಗಿದೆ. ನಗರಾದ್ಯಂತ ಸ್ವಾಗತ ಕಮಾನುಗಳು ಫ್ಲೆಕ್ಸ್, ಭಗವಾಧ್ವಜಗಳನ್ನು ಹಾಕಲಾಗಿದೆ.