Latest

ಸಾಮಾಜಿಕ ಜಾಲತಾಣಗಳ ತುಂಬ ಪ್ರಗತಿವಾಹಿನಿ ಸದ್ದು

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ

ಈಗಲೂ ಪ್ರತಿಭಟಿಸದಿದ್ದರೆ ಬೆಳಗಾವಿಯನ್ನೇ ಎತ್ತಿಕೊಂಡು ಹೋದಾರು ಎನ್ನುವ ಪ್ರಗತಿವಾಹಿನಿ ಸುದ್ದಿ ಶನಿವಾರ ಇಡೀ ದಿನ ವಾಟ್ಸ್, ಫೇಸ್ ಬುಕ್, ಟ್ವೀಟರ್, ವೆಬ್ ನ್ಯೂಸ್ ಫೋರ್ಟ್ ಲ್ ಗಳ ತುಂಬ ಸದ್ದು ಮಾಡಿತು.

Home add -Advt

ಈಗಲೂ ಪ್ರತಿಭಟಿಸದಿದ್ದರೆ ಬೆಳಗಾವಿಯನ್ನೇ ಎತ್ತಿಕೊಂಡು ಹೋದಾರು

ಶನಿವಾರ ಬೆಳಗಾಗುತ್ತಿದ್ದಂತೆ ನೂರಾರು ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಆದ ಸುದ್ದಿ ಸರಕಾರದ ನಿರ್ಧಾರದ ವಿರುದ್ಧ ಎಲ್ಲೆಡೆ ಚರ್ಚೆ, ಆಕ್ರೋಶಕ್ಕೆ ಕಾರಣವಾಯಿತು. ಉತ್ತರ ಕರ್ನಾಟಕಕ್ಕೆ ಸರಕಾರ ದೊಡ್ಡ ಕೊಡುಗೆ ಕೊಡಲಿದೆ ಎನ್ನುವ ನಿರೀಕ್ಷೆಯಲ್ಲಿದ್ದ ಜನರಿಗೆ ವಿಟಿಯು ವಿಭಜನೆ ನಿರ್ಧಾರ ದೊಡ್ಡ ಶಾಕ್ ಆಗಿತ್ತು.

ಇಡೀ ದಿನ ಪ್ರಗತಿವಾಹಿನಿ ಸುದ್ದಿಯ ಚರ್ಚೆ ನಡೆದು, ವಿವಿಧ ಸಂಘಟನೆಗಳು ಭಾನುವಾರ ಚನ್ನಮ್ಮ ವೃತ್ತದಲ್ಲಿ ಬೃಹತ್ ಪ್ರತಿಭಟನೆ ನಡೆಸುವ ತೀರ್ಮಾನ ತೆಗೆದುಕೊಂಡವು. ಹಲವಾರು ಜನಪ್ರತಿನಿಧಿಗಳು ಸಹ ಸರಕಾರದ ತೀರ್ಮಾನದ ವಿರುದ್ದ ಸಿಡಿದೇಳುವ ಮಾತನ್ನಾಡಿದ್ದಾರೆ. ರಾಜ್ಯಸರಕಾರವೇ ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ಹೋರಾಟಕ್ಕೆ ಪ್ರೇರಣೆ ನೀಡುವಂತಹ ನಿರ್ಧಾರ ಇದು ಎಂದು ರಾಜ್ಯಸಭಾ ಸದಸ್ಯ ಪ್ರಭಾಕರ ಕೋರೆ ಕಿಡಿಕಾರಿದರು. ಭಾನುವಾರವೇ ಜನಪ್ರತಿನಿಧಿಗಳ ಸಭೆ ಕರೆದು ಮುಂದಿನ ಹೋರಾಟದ ನಿರ್ಧಾರ ತೆಗೆದುಕೊಳ್ಳುವುದಾಗಿ ಸಂಸದ ಸುರೇಶ ಅಂಗಡಿ ತಿಳಿಸಿದರು. ಬೆಂಗಳೂರಿನಿಂದ ಮರಳಿದ ತಕ್ಷಣ ಭಾನುವಾರವೇ ಮುಂದಿನ ಹೋರಾಟದ ಸ್ಪಷ್ಟ ನಿರ್ಧಾರ ಮಾಡುವುದಾಗಿ ವಿಧಾನಪರಿಷತ್ ಸದಸ್ಯ ಮಹಾಂತೇಶ ಕವಟಗಿಮಠ ತಿಳಿಸಿದರು.

ಕನ್ನಡ ಸಂಘಟನೆಗಳ ಮುಖಂಡರಾದ ಅಶೋಕ ಚಂದರಗಿ, ದೀಪಕ್ ಗುಡಗನಟ್ಟಿ, ರಾಜೀವ ಟೋಪಣ್ಣವರ್, ದೀಪಕ್ ಜಮಖಂಡಿ ಮೊದಲಾದವರೂ ಉಗ್ರ ಪ್ರತಿಭಟನೆಯ ನಿರ್ಧಾರ ಪ್ರಕಟಿಸಿದರು.

ಬಿಗ್ ನ್ಯೂಸ್ ಚಾನೆಲ್ ಈ ಸಂಬಂಧ ಸಂವಾದವನ್ನೇ ಏರ್ಪಡಿಸಿತ್ತು.

ಒಟ್ಟಾರೆ ಸರಕಾರದ ಜನವಿರೋಧಿ ನಿಲುವಿಗೆ ತೀವ್ರ ಆಕ್ರೋಶ ವ್ಯಕ್ತವಾಗಿದ್ದು, ಭಾನುವಾರ ಇದೊಂದು ಜನಾಂದೋಲನವಾಗಿ ರೂಪುಗೊಳ್ಳುವ ಸೂಚನೆ ನೀಡಿದೆ. ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಕ್ಷಣ ಎಚ್ಚೆತ್ತು ತಮ್ಮ ನಿರ್ಧಾರದಿಂದ ಹಿಂದೆ ಸರಿಯದಿದ್ದಲ್ಲಿ ಮತ್ತೊಮ್ಮೆ ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ಹೋರಾಟಕ್ಕೆ ಹಾದಿಮಾಡಿಕೊಟ್ಟಂತಾಗಬಹುದು.

ಈಗಲೂ ಪ್ರತಿಭಟಿಸದಿದ್ದರೆ ಬೆಳಗಾವಿಯನ್ನೇ ಎತ್ತಿಕೊಂಡು ಹೋದಾರು

Related Articles

Back to top button