Latest
ರಾಯಪುರ ಅಖಿಲ ಭಾರತ ಸ್ಪೋರ್ಟ್ಸ್ ನಲ್ಲಿ ಬೆಳಗಾವಿ ಆರ್ ಎಫ್ ಒಗೆ ಬ್ರಾಂಜ ಮೆಡಲ್
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ
ಛತ್ತಿಸಗಡದ ರಾಯಪುರದಲ್ಲಿ ನಡೆದ ಅಖಿಲ ಭಾರತೀಯ 24ನೇ ಅರಣ್ಯ ಕ್ರೀಡಾಕೂಟದಲ್ಲಿ ಬೆಳಗಾವಿ ಅರಣ್ಯ ವಿಭಾಗದ ಆರ್ ಎಫ್ ಒ ಸಂಗಮೇಶ ಪ್ರಭಾಕರ ಬ್ರಾಂಜ್ ಮೆಡೆಲ್ ಪಡೆದುಕೊಂಡಿದ್ದಾರೆ.
50ಕಿಮೀ ಸೈಕ್ಲಿಂಗ್ ಸ್ಪರ್ಧೆಯಲ್ಲಿ ಕರ್ನಾಟಕ ಅರಣ್ಯ ಇಲಾಖೆಯನ್ನು ಪ್ರಭಾಕರ ಸಂಗಮೇಶ ಪ್ರತಿನಿಧಿಸಿದ್ದರು.
ಜನೇವರಿ 9ರಂದು ಪ್ರಾರಂಭವಾದ 24ನೇ ಅಖಿಲ ಭಾರತ ಫಾರೆಸ್ಟ್ ಮೀಟ್ ನಲ್ಲಿ ದೇಶದ ಎಲ್ಲ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳು ಭಾಗವಹಿಸಿವೆ.
ಛತ್ತಿಸಗಡ ಮುಖ್ಯಮಂತ್ರಿ ಭೂಪೇಶ ಭಗೆಲಾ, ಕೇಂದ್ರ ಪರಿಸರ ಸಚಿವ ಡಾ. ಹರ್ಷವರ್ಧನ, ಕ್ರಿಕೇಟಿಗ ವಿವಿಎಸ್ ಲಕ್ಷ್ಮಣ ಹಾಗೂ ಎಲ್ಲ ರಾಜ್ಯಗಳ ಪಿಸಿಸಿಎಫ್ ಗಳು ಭಾಗವಹಿಸಿದ್ದರು.




