ಪ್ರಗತಿವಾಹಿನಿ ಸುದ್ದಿ, ಬೆಳಗಾವಿ
ಸನ್ನಡತೆಯ ಆಧಾರದ ಮೇಲೆ 10 ಕೈದಿಗಳನ್ನು ಬಿಡುಗಡೆ ಮಾಡಲು ಬೆಳಗಾವಿಯ ಹಿಂಡಲಗಾ ಜೈಲಿನ ಸಲಹಾ ಮಂಡಳಿ ಶಿಫಾರಸ್ಸು ಮಾಡಿದೆ.
ಗುರುವಾರ ನಡೆದ ಮಂಡಳಿಯ ಸಭೆಯ ಮುಂದೆ 14 ವರ್ಷ ಶಿಕ್ಷೆ ಪೂರೈಸಿದ 6 ಮಹಿಳೆಯರು ಸೇರಿದಂತೆ 16 ಕೈದಿಗಳ ಪಟ್ಟಿ ಇಡಲಾಗಿತ್ತು. ಪರಿಶೀಲನೆ ಬಳಿಕ ಇಬ್ಬರು ಮಹಿಳೆಯರು ಸೇರಿ 10 ಜನರನ್ನು ಬಿಡುಗಡೆ ಮಾಡಲು ಶಿಫಾರಸ್ಸು ಮಾಡಬೇಕು ಎಂದು ನಿರ್ಧರಿಸಲಾಯಿತು.
ಮೊಹಮ್ಮದ್ ಹವಾಲ್ದಾರ್, ರಾಚಪ್ಪ ಕದಳಿ, ಶ್ರೀರಸ್ ಸಾಂಬ್ರೇಕರ್, ಫರ್ನಾಂಡೀಸ್ ಡಿಸೋಜಾ, ಯಲ್ಲಪ್ಪ ಹರಿಜನ, ಬಸಯ್ಯ ಹಿರೇಮಠ, ರೇಣುಕಾ ಕಮ್ಮಾರ, ಲಕ್ಷ್ಮಿ ನಾಯಕ, ಮಲ್ಲಪ್ಪ ಅಕನೂರು ಹಾಗೂ ಗಂಗಾಧರ ಗಾಡಗೆ ಬಿಡುಗಡೆಗೆ ಶಿಫಾರಸ್ಸಾದವರು.
ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಆರ್.ಜೆ. ಸತೀಶ್ ಸಿಂಗ್, ಜಿಲ್ಲಾಧಿಕಾರಿ ಎಸ್.ಬಿ.ಬೊಮ್ಮನಳ್ಳಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಧೀರಕುಮಾರ ರಡ್ಡಿ, ಜಿಲ್ಲಾ ಆಸ್ಪತ್ರೆಯ ಸರ್ಜನ್ ಖಾನ್, ಸದಸ್ಯರಾದ ಮಹಾನಗರ ಪಾಲಿಕೆ ಸದಸ್ಯೆ ಅನುಶ್ರೀ ದೇಶಪಾಂಡೆ, ಮಲ್ಲೇಶ ಚೌಗಲೆ ಹಾಗೂ ಅಭಿಮನ್ಯು ಡಾಗಾ ಇದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ