Latest

ಹೊಸ ಕಾರು ಹುಂಡೈ ವೆನ್ಯೂ ಬೆಳಗಾವಿಯಲ್ಲಿ ಬಿಡುಗಡೆ

 

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ

ಹುಂಡೈ ಕಂಪನಿಯ ಹೊಸ ಮಾದರಿಯ ಕಾರು ಹುಂಡೈ ವೆನ್ಯೂವನ್ನು ಬೆಳಗಾವಿ ಮಾರುಕಟ್ಟೆಗೆ ಬಿಡುಗಡೆ ಮಾಡಲಾಗಿದೆ.

ಹುಂಡೈ ಬೆಳಗಾವಿ ವಿತರಕರಾದ ನಾಗಶಾಂತಿ ಹುಂಡೈ ಶೋ ರೂಂ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಾಸಕ ಅನಿಲ ಬೆನಕೆ ನೂತನ ಕಾರನ್ನು ಬಿಡುಗಡೆ ಮಾಡಿದರು. ಸ್ಮಾರ್ಟ್ ಸಿಟಿಯಾಗಿ ಬೆಳೆಯುತ್ತಿರುವ ಬೆಳಗಾವಿಯ ರಸ್ತೆಗಳಲ್ಲಿ ಇಂತಹ ಸ್ಮಾರ್ಟ್ ಕಾರುಗಳು ಓಡಾಡುವುದರಿಂದ ನಗರಕ್ಕೆ ಇನ್ನಷ್ಟು ಮೆರಗು ಬರುತ್ತದೆ. ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಬೆಳಗಾವಿಯ ರಸ್ತೆ ಗಟಾರಗಳಷ್ಟೇ ಅಲ್ಲ, ಎಲ್ಲ ವ್ಯವಸ್ಥೆಗಳೂ ಸ್ಮಾರ್ಟ್ ಆಗಲಿವೆ ಎಂದು ಬೆನಕೆ ಹೇಳಿದರು. 

Home add -Advt
ಹುಂಡೈ ವೆನ್ಯೂ ಮೊದಲ ಗ್ರಾಹಕ ಅಭಿನಂದನ ಜಾಬಣ್ಣವರ್ ಅವರಿಗೆ ಶಾಸಕ ಅನಿಲ ಬೆನಕೆ ಕೀ ಹಸ್ತಾಂತರಿಸಿದರು. ನಾಗಶಾಂತಿ ಹುಂಡೈ ಎಂಡಿ ಕಿರಣ ಅಗಡಿ ಮತ್ತಿತರರು ಇದ್ದಾರೆ.

ನಾಗಶಾಂತಿ ಮ್ಯಾನೇಜಿಂಗ್ ಡೈರೆಕ್ಟರ್ ಕಿರಣ ಅಗಡಿ, ನೂತನ ಕಾರು ಬೆಳಗಾವಿಯಂತಹ ಮಹಾನಗರಗಳಿಗೆ ಅತ್ಯಂತ ಉಪಯುಕ್ತವಾಗಿವೆ. ಈ ಮಾದರಿಯ ಕಾರುಗಳಿಗೆ ಭಾರೀ ಬೇಡಿಕೆ ಇದ್ದು, ಈಗಾಗಲೆ ಬೆಳಗಾವಿಯಲ್ಲಿ 25ಕ್ಕೂ ಹೆಚ್ಚು ಕಾರುಗಳು ಬುಕ್ ಆಗಿವೆ ಎಂದು ತಿಳಿಸಿದರು.

3 ಮಾದರಿಯ ಎಂಜಿನ್ ಕಾರುಗಳು ಲಭ್ಯವಿದ್ದು, ಮನೆ ಮತ್ತು ಕಚೇರಿ ನಂತರ ಹೆಚ್ಚಿನ ಸಮಯವನ್ನು ಕಾರಿನಲ್ಲಿ  ಕಳೆಯುವ  ನಮಗೆ ಖುಷಿ ನೀಡುವ ರೀತಿಯಲ್ಲಿ ಹುಂಡೈ ವೆನ್ಯೂ ರೂಪಿಸಲಾಗಿದೆ ಎಂದು ಅಗಡಿ ತಿಳಿಸಿದರು. 

ಜನರಲ್ ಮ್ಯೇನೇಜರ್ ಸತೀಶ್ ಪ್ರಭು, ಸೇಲ್ಸ್ ಮ್ಯಾನೇಜರ್ ಗಿರೀಶ್ ಭುಜಣ್ಣವರ್ ಮೊದಲಾದವರು ಇದ್ದರು. 

 

 

Related Articles

Back to top button