ಪ್ರಗತಿವಾಹಿನಿ ಸುದ್ದಿ, ಬೆಳಗಾವಿ
ಬೆಳಗಾವಿ ಲೋಕಸಭಾ ಕ್ಷೇತ್ರದಿಂದ ಮಹಾರಾಷ್ಟ್ರ ಏಕೀಕರಣ ಸಮಿತಿ 101 ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿದೆ.
ದೀರ್ಘ ಕಾಲದಿಂದ ಬಾಕಿ ಇರುವ ಗಡಿ ವಿವಾದದ ಕುರಿತು ರಾಷ್ಟ್ರದ ಗಮನ ಸೆಳೆಯುವ ಉದ್ದೇಶದಿಂದ 101 ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಎಂಇಎಸ್ ಮುಖಂಡರ ಸಭೆಯಲ್ಲಿ ನಿರ್ಧರಿಸಲಾಗಿದೆ.
ಪಂಚಾಯಿತಿಯಿಂದ, ಮಹಾನಗರ ಪಾಲಿಕೆ, ಲೋಕಸಭೆವರೆಗೆ ವಿವಿಧ ಚುನಾವಣೆಗೆ ಸ್ಪರ್ಧಿಸಲು ಆಸಕ್ತರಾಗಿರುವವರೆಲ್ಲ ಈ ಚುನಾವಣೆಯಲ್ಲಿ ಸ್ಪರ್ಧಿಸುವಂತೆ ಎಂಇಎಸ್ ಕರೆ ನೀಡಿದೆ . ಇದರಿಂದಾಗಿ ಯಾರ್ಯಾರು, ಎಷ್ಟೆಷ್ಟು ಜನರ ಬೆಂಬಲ ಹೊಂದಿದ್ದಾರೆ ಎನ್ನುವುದೂ ಗೊತ್ತಾಗಲಿದೆ.
ಚುನಾವಣೆಗೆ ಸಲ್ಲಿಸಬೇಕಾದ ಠೇವಣಿ ಹಣವನ್ನು ಸಾರ್ವಜನಿಕರಿಂದ ದೇಣಿಗೆ ಮೂಲಕ ಸಂಗ್ರಹಿಸಲು ನಿರ್ಧರಿಸಲಾಗಿದೆ.
1996ರಲ್ಲಿ ಬೆಳಗಾವಿ ಕ್ಷೇತ್ರದಿಂದ 452 ಪಕ್ಷೇತರರು ಸೇರಿದಂತೆ 456 ಅಭ್ಯರ್ಥಿಗಳು ಕಣಕ್ಕಿಳಿದಿದ್ದರು.
ಈ ಬಾರಿ 101 ಜನ ಪಕ್ಷೇತರರು ಸ್ಪರ್ಧಿಸಿದರೆ ಅಂದಾಜು 8-9 ಇವಿಎಂ ಬೇಕಾಗುತ್ತದೆ. ಮತದಾನವೂ ವಿಳಂಬವಾಗುತ್ತದೆ.
ಸತ್ತುಹೋಗಿರುವ ಎಂಇಎಸ್ ಜೀವಂತವಾಗಿದೆ ಎಂದು ತೋರಿಸಲು ಈ ಮೂಲಕ ನಾಯಕರು ಹರಸಾಹಸ ಪಡುತ್ತಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ