Latest

ಎಐಸಿಸಿ ಉಸ್ತುವಾರಿಗಳ ನೇಮಕ; ಪ್ರಿಯಾಂಕಾ ಗಾಂಧಿ ಮತ್ತೆ ಸಕ್ರೀಯ ರಾಜಕಾರಣಕ್ಕೆ

   ಪ್ರಗತಿವಾಹಿನಿ ಸುದ್ದಿ, ನವದೆಹಲಿ

ಎಐಸಿಸಿ ಅಧ್ಯಕ್ಷ ರಾಹುಲ ಗಾಂಧಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳ ನೇಮಕ ಮಾಡಿ ಆದೇಶ ಹೊರಡಿಸಿದ್ದು, ಅವರಿಗೆ ವಿವಿಧ ರಾಜ್ಯಗಳ ಉಸ್ತುವಾರಿ ನೀಡಿದ್ದಾರೆ.

ಸಹೋದರಿ ಪ್ರಿಯಾಂಕಾ ವಾದ್ರಾ ಅವರನ್ನು ಪ್ರಧಾನ ಕಾರ್ಯದರ್ಶಿಯನ್ನಾಗಿ ನೇಮಿಸಿ, ಉತ್ತರ ಪ್ರದೇಶ ಪೂರ್ವ ಭಾಗದ ಉಸ್ತುವಾರಿ ನೀಡಿದ್ದಾರೆ. ಇದರಿಂದಾಗಿ ಪ್ರಿಯಾಂಕಾ ಮತ್ತೆ ಸಕ್ರೀಯ ರಾಜಕಾರಣಕ್ಕೆ ಮರಳಿದಂತಾಗಿದೆ.  ಸಿ.ವೇಣುಗೋಪಾಲ ಅವರನ್ನು ಕರ್ನಾಟಕದ ಉಸ್ತುವಾರಿಯನ್ನಾಗಿ ಪುನರ್ ನೇಮಕ ಮಾಡಲಾಗಿದೆ. ಅಶೋಕ ಗಹ್ಲೋಟ್ ಅವರನ್ನು ಸಂಘಟನಾ ಪ್ರಧಾನ ಕಾರ್ಯದರ್ಶಿಯನ್ನಾಗಿ ನೇಮಿಸಲಾಗಿದೆ.

ಜ್ಯೋತಿರಾಧಿತ್ಯ ಸಿಂಧ್ಯಾ ಅವರಿಗೆ ಉತ್ತರ ಪ್ರದೇಶ ಪಶ್ಚಿಮ ಭಾಗದ ಜವಾಬ್ದಾರಿ ನೀಡಲಾಗಿದೆ. ಗುಲಾಮ ನಬಿ ಆಜಾದ್ ಅವರಿಗೆ ಹರಿಯಾಣದ ಜವಾಬ್ದಾರಿ ನೀಡಲಾಗಿದೆ. 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button