Latest

ಐಟಿ ಕೋ-ಆರ್ಡಿನೇಟರ್ ಕೋರ್ಸ್ ಸಮಾರೋಪ

ಪ್ರಗತಿವಾಹಿನಿ ಸುದ್ದಿ, ಚಿಕ್ಕೋಡಿ:
ಸ್ಥಳೀಯ ಕೆಎಲ್‌ಇ ಎಂಜಿನಿಯರಿಂಗ್ ಕಾಲೇಜಿನಲ್ಲಿ ರಾಷ್ಟ್ರೀಯ ಕೌಶಲಾಭಿವೃದ್ಧಿ ಯೋಜನೆಯ ಪ್ರಧಾನ ಮಂತ್ರಿ ಕೌಶಲ ವಿಕಾಸ ಯೋಜನೆಯಡಿ ನಿರುದ್ಯೋಗಿ ಯುವಕರಿಗೆ ಹಮ್ಮಿಕೊಳ್ಳಲಾಗಿದ್ದ ಐಟಿ ಕೋ-ಆರ್ಡಿನೇಟರ್ ಇನ್ ಸ್ಕೂಲ್ ತರಬೇತಿ ಕೋರ್ಸ್‌ನ ಸಮಾರೋಪ ಸಮಾರಂಭ ಜರುಗಿತು.
ಮುಖ್ಯ ಅತಿಥಿ, ಕೋರ್ಸ್ ಪರಿವೀಕ್ಷಕ ತೆಲಂಗಾಣದ ಪಿ. ಅರುಣ ಪಾಂಡೆ ಮಾತನಾಡಿ, ಈ ಕೋರ್ಸ್‌ನ ಸರ್ಟಿಫಿಕೇಟ್ ಹೊಂದಿದವರಿಗೆ ಸರಕಾರಿ ಹಾಗೂ ಖಾಸಗಿ ವಲಯದಲ್ಲಿ ಸಾಕಷ್ಟು ಬೇಡಿಕೆ ಇದೆ. ತರಬೇತಿಯಲ್ಲಿ ಕಲಿತ ಜ್ಞಾನವನ್ನು ವೃತ್ತಿಯಲ್ಲಿ ಅಳವಡಿಸಿಕೊಂಡು ಜೀವನದಲ್ಲಿ ಯಶಸ್ವಿಯಾಗಿ ಎಂದರು.
ಅಧ್ಯಕ್ಷತೆ ವಹಿಸಿದ್ದ ವಿಭಾಗ ಮುಖ್ಯಸ್ಥ ಪ್ರೊ. ವಿ.ಕೆ. ಪಾಟೀಲ ಮಾತನಾಡಿ, ಮೂರನೇ ಬಾರಿ ಮಹಾವಿದ್ಯಾಲಯದಲ್ಲಿ ಹಮ್ಮಿಕೊಳ್ಳಲಾಗಿರುವ ಈ ತರಬೇತಿಯ ಸದುಪಯೋಗಪಡಿಸಿಕೊಳ್ಳಿ. ತರಬೇತಿಯಲ್ಲಿ ಪಡೆದ ಜ್ಞಾನದಿಂದ ಜೀವನ ರೂಪಿಸಿಕೊಳ್ಳಿ ಎಂದು ಹೇಳಿದರು.
ಸಂಯೋಜಕ ಪ್ರೊ. ಮನೋಜ ನಾಂದಣಿ ಸ್ವಾಗತಿಸಿದರು. ಪ್ರೊ. ವೀರಣ್ಣಾ ಮೋದಿ ವಂದಿಸಿದರು. ೧೬ ಯುವಕರು ತರಬೇತಿ ಶಿಬಿರದಲ್ಲಿ ಭಾಗವಹಿಸಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button