

ಪ್ರಗತಿವಾಹಿನಿ ಸುದ್ದಿ, ಶಿರಸಿ:
ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ತಹಶಿಲ್ದಾರ ಕಚೇರಿಯ ಕಂದಾಯ ಅಧಿಕಾರಿಯಾಗಿದ್ದ ವಿನಾಯಕ ಭಟ್ (46) ಇಂದು ನಿಧನರಾಗಿದ್ದಾರೆ.
ಮಂಗಳವಾರ ಮಿನಿವಿಧಾನ ಸೌಧದ ಮುಂದೆ ನಿಲ್ಲಿಸಿಡಲಾಗಿದ್ದ ತಮ್ಮ ಕಾರಿನಲ್ಲಿಯೇ ಮೃತಪಟ್ಟಿರುವುದು ಕಂಡು ಬಂದಿದೆ. ಅವರ ಸಾವಿಗೆ ಕಾರಣ ತಿಳಿದು ಬಂದಿಲ್ಲವಾದರೂ ಹೃದಯಾಘಾತದಿಂದಾಗಿ ಮೃತಪಟ್ಟಿರಬಹುದೆಂದು ಅಂದಾಜಿಸಲಾಗಿದೆ. ಮದ್ಯಾಹ್ನ ಕಾರಿನಲ್ಲಿ ಕಚೇರಿಗೆ ಬಂದಿದ್ದ ಅವರು ಸಂಜೆ 5 ಗಂಟೆಯಾದರೂ ಕಚೇರಿಯ ಒಳಗಡೆ ಬಾರದಿರುವದನ್ನು ಕಂಡು ಕಚೇರಿಯ ಸಿಬ್ಬಂದಿಯೊರ್ವರು ಕಾರಿನ ಹತ್ತಿರ ಬಂದು ನೋಡಿದಾಗ ಅವರು ನಿಧನರಾಗಿರುವುದು ಕಂಡು ಬಂದಿದೆ. ಮೂಲತಹ ಯಲ್ಲಾಪುರ ತಾಲೂಕಿನವರಾಗಿದ್ದ ಅವರು ಮೊದಲಿಗೆ ಗ್ರಾಮ ಲೆಕ್ಕಿಗರಾಗಿ ಸಿದ್ದಾಪುರದಲ್ಲಿ ಸೇವೆ ಸಲ್ಲಿಸಿ, ಬಳಿಕ ಪದೋನ್ನತಿಯೊಂದಿಗೆ ಕಂದಾಯ ಅಧಿಕಾರಿಯಾಗಿ ಜೊಯಿಡಾದಲ್ಲಿ ಸೇವೆ ಸಲ್ಲಿಸಿದ್ದರು. ಅಲ್ಲಿಂದ ಕಳೆದ ಎರಡು ವರ್ಷದ ಹಿಂದೆ ಶಿರಸಿಗೆ ವರ್ಗಾವಣೆಗೊಂಡು ಸೇವೆ ಸಲ್ಲಿಸುತ್ತಿದ್ದರು. ಕಂದಾಯ ಅಧಿಕಾರಿಯ ನಿಧನಕ್ಕೆ ಸಹಾಯಕ ಆಯುಕ್ತರಾದ ದೇವರಾಜ ಆರ್ ಹಾಗೂ ತಹಶಿಲ್ದಾರ ಶ್ರೀಧರ ಮುಂದಲಮನಿ ಸಂತಾಪ ವ್ಯಕ್ತಪಡಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ