Latest

ಚಾಲಕನಿಂದ ಆತ್ಮಹತ್ಯೆಗೆ ಯತ್ನ: ಮೇಲಧಿಕಾರಿಗಳ ಕಿರುಕಳ ಆರೋಪ

ಪ್ರಗತಿವಾಹಿನಿ ಸುದ್ದಿ, ಖಾನಾಪುರ:

ವಾಯುವ್ಯ ಸಾರಿಗೆ ಸಂಸ್ಥೆಯ ಖಾನಾಪುರ ಡಿಪೋ ಮೇಲಧಿಕಾರಿಗಳು ಕಿರುಕಳ ನೀಡುತ್ತಿದ್ದಾರೆಂದು ಆರೋಪಿಸಿ,  ಮನನೊಂದ ಚಾಲಕರೊಬ್ಬರು ಡಿಪೋ ಆವರಣದಲ್ಲಿ ಮೈಮೇಲೆ ಡಿಸೆಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಶುಕ್ರವಾರ ಸಂಜೆ ನಡೆದಿದೆ.

Home add -Advt

ಆತ್ಮಹತ್ಯೆಗೆ ಮುಂದಾದ ಚಾಲಕನನ್ನು ಸ್ಥಳದಲ್ಲಿದ್ದ ಸಹೋದ್ಯೋಗಿಗಳು ರಕ್ಷಿಸಿ ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದರಿಂದ ಪ್ರಾಣಾಪಾಯವಾಗಲಿಲ್ಲ.
ನಿತ್ಯ ಖಾನಾಪುರ ಲಾತೂರ್ ಡ್ಯೂಟಿ ಮಾಡುತ್ತಿದ್ದ ಚಾಲಕ ಮತ್ತು ನಿರ್ವಾಹಕರನ್ನು ಡ್ಯೂಟಿ ಬದಲಿಸಿ ಆರ್ಡಿನರಿ ಡ್ಯೂಟಿಗೆ ಹಾಕಿದ್ದೇ ಚಾಲಕ ಆತ್ಮಹತ್ಯೆ ಮಾಡಿಕೊಳ್ಳಲು ಕಾರಣ ಎಂದು ಘಟನಾ ಸ್ಥಳದಲ್ಲಿದ್ದ ಚಾಲಕರು ಮತ್ತು ನಿರ್ವಾಹಕರು ತಿಳಿಸಿದ್ದಾರೆ. ಈ ಪ್ರಕರಣದ ತನಿಖೆ ಪ್ರಗತಿಯಲ್ಲಿದ್ದು, ಘಟನೆಯಿಂದ ಮನನೊಂದ ಚಾಲಕ ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ. ಅವರು ಗುಣಮುಖರಾದ ನಂತರ ಅವರಿಂದ ದೂರು ಪಡೆದು ಘಟನೆಯ ತನಿಖೆ ಕೈಗೊಳ್ಳಲಾಗುತ್ತದೆ ಎಂದು ಘಟನಾ ಸ್ಥಳಕ್ಕೆ ಭೇಟಿ ನೀಡಿ ಘಟನೆಯ ಪರಿಶೀಲನೆ ಕೈಗೊಂಡ ಖಾನಾಪುರ ಠಾಣೆಯ ಪೊಲೀಸರು ತಿಳಿಸಿದ್ದಾರೆ.

Related Articles

Back to top button