Latest

ಭಾಷೆಯಿಂದ ಸಂಸ್ಕೃತಿ ಬೆಳೆಯುತ್ತದೆ ; ಮಹಾವೀರ ಗಣಿ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ :
ಮಾತೃಭಾಷೆ ಮಾಧ್ಯಮದಲ್ಲಿ ಕಲಿಯುವುದರಿಂದ ವಿದ್ಯಾರ್ಥಿಗಳ ಮನೋವಿಕಾಸ ಹಾಗೂ ಸರ್ವಾಂಗೀಣ ಬೆಳವಣಿಗೆಯಾಗುತ್ತದೆ. ಕಲಿಕೆ ಸುಲಭಗೊಂಡು ಸಂಸ್ಕೃತಿ ಬೆಳೆಯಲು ಸಹಾಯವಾಗುತ್ತದೆ ಎಂದು ಜಿಲ್ಲಾ ನಗರಾಭಿವೃದ್ಧಿ ಘಟಕದ ಕಾರ್ಯಕಾರಿ ಅಭಿಯಂತರ ಮಹಾವೀರ ಗಣಿ ಹೇಳಿದರು. ನಗರದ ಭರತೇಶ ಕನ್ನಡ ಮಾಧ್ಯಮ ಶಾಲೆಯ ವಾರ್ಷಿಕೋತ್ಸವದಲ್ಲಿ ಮುಖ್ಯ ಅತಿಥಿಗಳಾಗಿ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಶಾಲಾ ಸಲಹಾ ಸಮಿತಿಯ ಅಧ್ಯಕ್ಷ ರಾಜೇಂದ್ರ ರಾಮಗೊಂಡಾ ಅಧ್ಯಕ್ಷತೆ ವಹಿಸಿದ್ದರು. ಡಾ. ರಾಜಶ್ರೀ ಮಹಾವೀರ ಗಣಿ, ಸುರೇಖಾ ಗೌರಗೊಂಡಾ ಹಾಗೂ ಜಿ.ಎಂ ಶೆಟ್ಟಿ ಉಪಸ್ಥಿತರಿದ್ದರು.
ಶ್ರೀ ಎ.ಎ ಸನದಿ ಸ್ವಾಗತಿಸಿದರು. ಜ್ಯೋತಿ ವರದಿ ವಾಚಿಸಿದರು. ಪ್ರಸಾದ ಪಾಶ್ಚಾಪುರೆ ವಂದಿಸಿದರು. ಪ್ರಿಯಾ ಮುನವಳ್ಳಿ ನಿರೂಪಿಸಿದರು. ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.

Related Articles

Back to top button