Latest

ಮಿತಿಗಿಂತ ಹೆಚ್ಚು ದಾಸ್ತಾನು: ಸಿಎಲ್-2 ಮದ್ಯದಂಗಡಿ ಲೈಸೆನ್ಸ್ ಅಮಾನತು

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ:

ಮಿತಿಗಿಂತ ಜಾಸ್ತಿ ಮದ್ಯ ದಾಸ್ತಾನು ಹೊಂದಿದ ಕಾರಣದಿಂದ ಸುಮಿತ್ರಾ ರಾಜೇಂದ್ರ ಶಿರಾಳಕರ ಎಂಬುವರ ಸಿಎಲ್-2 ಮದ್ಯ ಮಾರಾಟ ಲೈಸೆನ್ಸ್ ಅನ್ನು ಏ.8 ರಿಂದ ಏ.23 ರ ರಾತ್ರಿ 12 ಗಂಟೆಯವರೆಗೆ ಕರ್ನಾಟಕ ಅಬಕಾರಿ ಕಾಯ್ದೆ 1965 ರ ಕಲಂ 29(1)ಬಿ ರನ್ವಯ ಅಮಾನತುಗೊಳಿಸಿ ಜಿಲ್ಲಾಧಿಕಾರಿ ಡಾ. ಆರ್. ವಿಶಾಲ ಆದೇಶ ಹೊರಡಿಸಿದ್ದಾರೆ.

ಅಬಕಾರಿ ನಿರೀಕ್ಷಕರು, ಜಿಲ್ಲಾ ವಿಚಕ್ಷಣ ದಳ, ಅಬಕಾರಿ ಉಪ ಆಯುಕ್ತರ ಕಚೇರಿಯವರು ಮಾ.28 ರಂದು ಮಧ್ಯಾಹ್ನ 3 ಗಂಟೆಗೆ ಅಂಗಡಿಗೆ ಭೇಟಿ ನೀಡಿ ತಪಾಸಣೆ ಮಾಡಿದ ಸಂದರ್ಭದಲ್ಲಿ 72.720 ಲೀ ಮದ್ಯದ ದಾಸ್ತಾನು ಹೆಚ್ಚಾಗಿರುವುದು ಕಂಡು ಬಂದಿತ್ತು. ನಿಯಮಗಳು 1967 ಸಿಎಲ್-2 ಸನ್ನದು ಷರತ್ತು 7, 7(2)ರ ಹಾಗೂ ಕರ್ನಾಟಕ ಅಬಕಾರಿ ಸನ್ನದು ನಿಯಮಗಳು 1967ರ ನಿಯಮ 21(3)ರ ಉಲ್ಲಂಘನೆ ಹಾಗೂ ಕರ್ನಾಟಕ ಅಬಕಾರಿ ಕಾಯ್ದೆ 1965ರ ಕಲಂ 32 ರಂತೆ ದಂಡನಾರ್ಹ ಅಪರಾಧವಾಗಿದ್ದರಿಂದ 43/2019-19/07/ಅನಿ/070207 ಪ್ರಕರಣ ದಾಖಲಿಸಿ ಸುಮಿತ್ರಾ ರಾಜೇಂದ್ರ ಶಿರಾಳಕರ ಅವರ ಸಿಎಲ್-2 ಸನ್ನದನ್ನು ಅಮಾನತುಗೊಳಿಸಲಾಗಿದೆ ಎಂದು ಅಬಕಾರಿ ಉಪ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button