ಪ್ರಗತಿವಾಹಿನಿ ಸುದ್ದಿ, ಬೆಳಗಾವಿ
ಚಿಕ್ಕೋಡಿ ತಾಲೂಕು ಹುನ್ನರಗಿ ಗ್ರಾಮದವರಾದ ಸದ್ಯ ಬೆಳಗಾವಿ ಬಿ.ವಿ. ಬೆಲ್ಲದ ಕಾನೂನು ಮಹಾವಿದ್ಯಾಲಯದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿರುವ ವಿಜಯ ವಿರುಪಾಕ್ಷ ಮುರದಂಡೆ ಅವರ ಪ್ರಬಂಧಕ್ಕೆ ಹುಬ್ಬಳ್ಳಿಯ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯವು ಪಿಎಚ್‌ಡಿ ನೀಡಿದೆ.
’ಪೊಲೀಸ್ ಟಾರ್ಚರ್: ಎ ಕ್ರಿಟಿಕಲ್ ಅನಾಲಿಸಿಸ್ ಫ್ರಾಮ್ ಹ್ಯೂಮನ್ ರೈಟ್ಸ್ ಪರಸ್ಪೆಕ್ಟಿವ್’ ಎಂಬ ಪ್ರಬಂಧ ಮಂಡಿಸಿದ್ದರು. ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯದ ಆವರಣದ ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಅಕಾಡೆಮಿ ಡೀನ್ ಡಾ. ಅರುಂಧತಿ ಕುಲಕರ್ಣಿ ಮಾರ್ಗದರ್ಶನ ಮಾಡಿದ್ದಾರೆ.