Latest

ಸೋಮವಾರ ಅಥಣಿ ಬಂದ್‌ಗೆ ನಿರ್ಧಾರ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ

ಮಹಾರಾಷ್ಟ್ರದ ಕೊಯ್ನಾ ಜಲಾಶಯದಿಂದ ನೀರು ಬಿಡುಗಡೆ ವಿಷಯದಲ್ಲಿ ಜನಪ್ರತಿನಿಧಿಗಳು ಕೇವಲ ಕಾಟಾಚಾರದ ಯತ್ನ ನಡೆಸಿದ್ದಾರೆ. ಮುಖ್ಯಮಂತ್ರಿಗಳಾಗಲಿ, ಜಲಸಂಪನ್ಮೂಲ ಖಾತೆಯ ಸಚಿವರಾಗಲಿ ಮುಂಬಯಿಗೆ ಹೋಗಿ ಅಲ್ಲಿಯ ಸರಕಾರದ ಮೇಲೆ ಒತ್ತಡ ತರದೇ ಕೇವಲ ಒಂದರ ಮೇಲೊಂದು ಪತ್ರ ಬರೆಯುವದರಲ್ಲೇ ಕಾಲಹರಣ ಮಾಡುತ್ತಿದ್ದಾರೆ. ಈ ಕ್ರಿಮಿನಲ್ ನಿರ್ಲಕ್ಷವನ್ನು ಪ್ರತಿಭಟಿಸಿ ಅಥಣಿಯ ಎಲ್ಲ ಸಂಘಟನೆಗಳು ಮತ್ತು ರಾಜಕೀಯ ಪಕ್ಷಗಳ ಸ್ಥಳೀಯ ನಾಯಕರು ಇಂದು, ಶುಕ್ರವಾರ ಸಂಜೆ ಸಭೆ ನಡೆಸಿ ಇದೇ ಸೋಮವಾರ ದಿ. ೨೦ ರಂದು ಅಥಣಿ ಬಂದ್ ನಡೆಸುವ ನಿರ್ಧಾರ ಕೈಕೊಂಡಿದ್ದಾರೆ.

Home add -Advt

ಕನ್ನಡ ಸಂಘಟನೆಗಳ ಮುಖಂಡ ಅಶೋಕ ಚಂದರಗಿ ಈ ವಿಷಯ ತಿಳಿಸಿದ್ದಾರೆೆ. ಅಥಣಿಯ ಪಿ ಡಬ್ಲ್ಯು ಡಿ ಕಚೇರಿಯ ಬಳಿ ನಡೆದ ಪಕ್ಷಾತೀತ ಸಭೆಯಲ್ಲಿ ಈ ನಿರ್ಧಾರ ಕೈಕೊಳ್ಳಲಾಗಿದೆ. ಕೃಷ್ಣಾ ತೀರದ ಜನತೆಯ ಹೋರಾಟಕ್ಕೆ ಬೆಳಗಾವಿ ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿಯು ಬೆಂಬಲ ವ್ಯಕ್ತಪಡಿಸಿ ಸೋಮವಾರ ಬೆಳಗಾವಿ ಜಿಲ್ಲಾಧಿಕಾರಿಗಳಿಗೆ ಮನವಿಯೊಂದನ್ನು ಸಲ್ಲಿಸಲಿದೆ ಎಂದು ಅವರು ಹೇಳಿದ್ದಾರೆ. 

Related Articles

Back to top button