Kannada NewsKarnataka News

1.50 ಲಕ್ಷ ರೂ. ಮೊತ್ತದ ಚೆಕ್ ವಿತರಿಸಿದ ಶಾಸಕಿ ಹೆಬ್ಬಾಳಕರ್

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಶುಕ್ರವಾರ 1.50 ಲಕ್ಷ ರೂ.ಗಳ ಚೆಕ್ ವಿತರಿಸಿದರು.

ಕ್ಷೇತ್ರದ ಸುಳಗಾ -ಉಚಗಾಂವ ಗ್ರಾಮದ ಸಂಜಯ ಮಾರುತಿ ಕಾಕಡೆ ಪಾರ್ಶ್ವವಾಯು (ಪ್ಯಾರಾಲೈಸಿಸ್) ರೋಗದಿಂದ ಬಳಲುತ್ತಿದ್ದಾರೆ. ಆದರೆ ಅದರ ಚಿಕಿತ್ಸೆಗೆ ಅವರ ಬಳಿ ಹಣ ಹೊಂದಿಸಲು ಸಾಧ್ಯವಾಗಲಿಲ್ಲ.  ವಿಷಯ ತಿಳಿದ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಮುಖ್ಯಮಂತ್ರಿಗಳ ಕಾರ್ಯಾಲಯ ಸಂಪರ್ಕಿಸಿದರು.

ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ಚಿಕಿತ್ಸೆಯ ವೆಚ್ಚ ಭರಿಸುವ ಸಲುವಾಗಿ 1,50,000 ರೂ. ಮಂಜೂರಾಗಿದ್ದು, ಅದರ ಚೆಕ್ ನ್ನು ಹೆಬ್ಬಾಳಕರ್ ಹಸ್ತಾಂತರಿಸಿ,  ಶುಭ ಹಾರೈಸಿದರು.

Related Articles

Back to top button