Latest

ಚಿನ್ನದ ದರ ಸ್ಥಿರ; ಬೆಳ್ಳಿ ಕುಸಿತ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಎರಡು ದಿನಗಳಿಂದ ಕುಸಿತ ಕಂಡಿದ್ದ ಚಿನ್ನಾಭರಣಗಳ ಬೆಲೆ ಇಂದು ಯಥಾಸ್ಥಿತಿ ಕಾಯ್ದುಕೊಂಡಿದೆ. ಭಾರದದಲ್ಲಿ ಚಿನ್ನದ ದರದಲ್ಲಿ ಇಂದು ಯಾವುದೇ ಬದಲಾವಣೆಯಾಗಿಲ್ಲ.

ಭಾರತದಲ್ಲಿ ಇಂದು 22ಕ್ಯಾರಟ್ 10ಗ್ರಾಂ ಚಿನ್ನ 47,800 ರೂ ಆಗಿದೆ. 24 ಕ್ಯಾರಟ್ ಚಿನ್ನದ ದರ 52,140ರೂ ಆಗಿದೆ.

ರಾಜಧಾನಿ ಬೆಂಗಳೂರಿನಲ್ಲಿ 22 ಕ್ಯಾರಟ್ 10 ಗ್ರಾಂ ಚಿನ್ನದ ದರ47,800 ರೂ ಆಗಿದೆ. 24 ಕ್ಯಾರೆಟ್ ಚಿನ್ನ 52,140 ರೂಪಾಯಿ ಆಗಿದೆ.

ಇನ್ನು ಹಲವು ನಗರಗಳಲ್ಲಿ 22 ಕ್ಯಾರೆಟ್ ಚಿನ್ನದ ಇಂದಿನ ದರ ಚೆನ್ನೈ- 48,160 ರೂ. ಮುಂಬೈ- 47,800 ರೂ, ದೆಹಲಿ- 47,800 ರೂ, ಕೊಲ್ಕತ್ತಾ- 47,800 ರೂ, ಹೈದರಾಬಾದ್- 47,800 ರೂ, ಪುಣೆ- 47,850 ರೂ, ಮಂಗಳೂರು- 47,800 ರೂ ಇದೆ.

24 ಕ್ಯಾರೆಟ್ ಚಿನ್ನ ಚೆನ್ನೈ- 52,540 ರೂ, ಮುಂಬೈ- 52,140 ರೂ, ದೆಹಲಿ- 52,140 ರೂ, ಹೈದರಾಬಾದ್- 52,140 ರೂ, ಪುಣೆ- 52,190 ರೂ, ಮಂಗಳೂರು- 52,140 ರೂ ಇದೆ.

ಇಂದು ಬೆಳ್ಳಿ ದರದಲ್ಲಿ ಕುಸಿತ ಕಂಡಿದ್ದು, ಬೆಂಗಳೂರಿನಲ್ಲಿ ಕೆಜಿ ಬೆಳ್ಳಿಗೆ 71,000 ರೂ ಇದೆ. ದೆಹಲಿ, ಮುಂಬೈನಲ್ಲಿ 66,300 ರೂ ಇದ್ದರೆ ಚನ್ನೈನಲ್ಲಿ 71,000 ರೂ ನಿಗದಿಯಾಗಿದೆ.

Related Articles

Back to top button