ಬೆಳಗಾವಿಯಲ್ಲಿ 13, ಚಿಕ್ಕೋಡಿಯಲ್ಲಿ 18 ಅಭ್ಯರ್ಥಿಗಳು ಅಂತಿಮ ಕಣದಲ್ಲಿ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ೦೨-ಬೆಳಗಾವಿ ಲೋಕಸಭಾ ಚುನಾವಣೆಗೆ ಸ್ಪರ್ಧಿಸಿ ಒಟ್ಟು ೨೧ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದು, ನಾಮಪತ್ರ ಹಿಂಪಡೆಯಲು ಕೊನೆಯ ದಿನಾಂಕವಾದ ಸೋಮವಾರ (ಏ.೨೨) ಒಟ್ಟು ೮ ಅಭ್ಯರ್ಥಿಗಳು ತಮ್ಮ ನಾಮಪತ್ರವನ್ನು ವಾಪಸ್ ಪಡೆದಿರುವುದರಿಂದ ಅಂತಿಮ ಕಣದಲ್ಲಿ ಒಟ್ಟು ೧೩ ಅಭ್ಯರ್ಥಿಗಳು ಉಳಿದಿರುತ್ತಾರೆ ಎಂದು ಜಿಲ್ಲಾ ಚುನಾವಣಾಧಿಕಾರಿ ನಿತೇಶ್ ಪಾಟೀಲ ಅವರು ತಿಳಿಸಿದ್ದಾರೆ.
ನಾಮಪತ್ರ ವಾಪಸ್ ಪಡೆದ ಅಭ್ಯರ್ಥಿಗಳ ವಿವರ:
೧. ಹಣಮಂತ ಶಿವಪ್ಪ ನಾಗನೂರ (ಪಕ್ಷೇತರ)
೨. ಈಶ್ವರ ಚಿಕ್ಕನರಗುಂದ (ಪಕ್ಷೇತರ)
೩. ದೊಡ್ಡಪ್ಪ ಈರಪ್ಪಾ ದೊಡಮನಿ (ಪಕ್ಷೇತರ)
೪. ಭಾರತಿ ಬೈಲಪ್ಪ ನೀರಲಕೇರಿ (ಪಕ್ಷೇತರ)
೫. ಸಾಗರ ಪಾಟೀಲ (ಪಕ್ಷೇತರ)
೬. ಮಗದುಮ್ ಇಸ್ಮಾಯಿಲ್ ಮಗದುಮ್ (ಪಕ್ಷೇತರ)
೭. ಮಹಾಂತೇಶ ಬಿ ನಿರ್ವಾಣಿ (ಪಕ್ಷೇತರ)
೮. ಮಹಾಂತೇಶ ಗೌಡರ (ಪಕ್ಷೇತರ)
ಅಂತಿಮವಾಗಿ ಕಣದಲ್ಲಿ ಉಳಿದ ಅಭ್ಯರ್ಥಿಗಳು:
೧. ಮಲ್ಲಪ್ಪ ಚೌಗಲಾ (ಉತ್ತಮ ಪ್ರಜಾಕೀಯ ಪಕ್ಷ)
೨. ಜಗದೀಶ ಶೆಟ್ಟರ್ (ಬಿಜೆಪಿ)
೩. ಬಸಪ್ಪ ಗುರುಸಿದ್ದಪ್ಪ ಕುಂಬಾರ (ಕರ್ನಾಟಕ ರಾ? ಸಮಿತಿ)
೪. ಮೃಣಾಲ ಹೆಬ್ಬಾಳಕರ (ಕಾಂಗ್ರೆಸ್ ಪಕ್ಷ)
೫. ರವಿ ಪಡಸಲಗಿ (ಪಕ್ಷೇತರ)
೬. ಅಶೋಕ ಅಪ್ಪುಗೋಳ (ಬಹುಜನ ಸಮಾಜ ಪಾರ್ಟಿ)
೭. ಪುಂಡಲೀಕ ಇಟ್ನಾಳ (ಪಕ್ಷೇತರ)
೮. ಅಶೋಕ ಪಾಂಡಾಪ್ಪಾ ಹಣಜಿ (ಪಕ್ಷೇತರ)
೯. ಲಕ್ಷ್ಮಣ ಜಡಗಣ್ಣನವರ (ಎಸ್.ಯು.ಸಿ.ಐ.ಸಿ)
೧೦. ಮಹಾದೇವ ಪಾಟೀಲ (ಪಕ್ಷೇತರ)
೧೧. ನಿತಿನ ಅಶೋಕ ಮಹಾಡಗುತ (ಪಕ್ಷೇತರ)
೧೨. ಅಶ್ಪಕ್ ಅಹಮದ ಉಸ್ತಾದ (ಪಕ್ಷೇತರ)
೧೩. ವಿಜಯ ಮೇತ್ರಾಣಿ (ಅಖಿಲ ಭಾರತೀಯ ಹಿಂದೂ ಮಹಾಸಭಾ).
ಚಿಕ್ಕೋಡಿ ಲೋಕಸಭಾ ಮತಕ್ಷೇತ್ರ: ಅಂತಿಮ ಕಣದಲ್ಲಿ ೧೮ ಅಭ್ಯರ್ಥಿಗಳು
ಲೋಕಸಭಾ ಚುನಾವಣೆಗೆ ಸಲ್ಲಿಕೆಯಾಗಿದ್ದ ನಾಮಪತ್ರಗಳನ್ನು ಹಿಂಪಡೆಯುವ ಅವಧಿ ಸೋಮವಾರ ಮುಕ್ತಾಯವಾಗಿದ್ದು ಒಟ್ಟಾರೆ ೨ ಅಭ್ಯರ್ಥಿಗಳು ತಮ್ಮ ಉಮೇದುವಾರಿಕೆ ವಾಪಸ್ ತೆಗೆದುಕೊಳ್ಳುವ ಮೂಲಕ ಅಂತಿಮ ಕಣದಲ್ಲಿ ೧೮ ಅಭ್ಯರ್ಥಿಗಳು ಉಳಿದಿರುತ್ತಾರೆ.
ಪಕ್ಷೇತರ ಅಭ್ಯರ್ಥಿಗಳಾದ ರಾಜು ಸೊಲ್ಲಾಪುರೆ ಹಾಗೂ ಇಸ್ಮಾಯಿಲ್ ಮಗದುಮ ಅವರುಗಳು ತಮ್ಮ ಉಮೇದುವಾರಿಕೆಯನ್ನು ಏ. ೨೨ ರಂದು ಹಿಂಪಡೆದಿದ್ದಾರೆ ಎಂದು ಚಿಕ್ಕೋಡಿ ಲೋಕಸಭಾ ಮತಕ್ಷೇತ್ರದ ಚುನಾವಣಾಧಿಕಾರಿ ರಾಹುಲ ಶಿಂಧೆ ಅವರು ತಿಳಿಸಿರುತ್ತಾರೆ.
ಅಂತಿಮ ಕಣದಲ್ಲಿ ಉಳಿದವರು-
ಭಾರತೀಯ ಜನತಾ ಪಾರ್ಟಿಯಿಂದ ಅಣ್ಣಸಾಹೇಬ ಎಸ್.ಜೊಲ್ಲೆ,
ಇಂಡಿಯನ್ ನ್ಯಾಷನಲ್ ಕಾಂಗ್ರೇಸ್ ಪಕ್ಷದ ಅಭ್ಯರ್ಥಿ ಪ್ರಿಯಾಂಕಾ ಜಾರಕಿಹೊಳಿ,
ಸರ್ವ ಜನತಾ ಪಾರ್ಟಿ ಪಕ್ಷದಿಂದ ಅಪ್ಪಾಸಾಹೇಬ ಕುರಣೆ,
ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದಿಂದ ಕುಮಾರ ಡೊಂಗರೆ,
ಬಹುಜನ ಭಾರತ ಪಾರ್ಟಿಯಿಂದ ಪವನಕುಮಾರ ಬಾಬುರಾವ ಮಾಳಗೆ,
ಭಾರತೀಯ ಜವಾನ ಕಿಸಾನ ಪಾರ್ಟಿಯಿಂದ ಸತ್ಯಪ್ಪ ದಶರಥ ಕಾಳೇಲಿ,
ಪಕ್ಷೇತರ ಅಭ್ಯರ್ಥಿಗಳಾದ ಕಾಡಯ್ಯ ಶಂಕರಯ್ಯ ಹಿರೇಮಠ,
ಕಾಶಿನಾಥ ಕುರಣಿ,
ಗಜಾನನ ಪೂಜಾರಿ,
ಜಿತೇಂದ್ರ ಸುಭಾಷ ನೇರ್ಲೆ,
ಭೀಮಸೇನ ಸನದಿ,
ಮಹೇಶ ಅಶೋಕ,
ಮೋಹನ ಮೊಟನ್ನವರ,
ಯಾಸೀನ ಶಿರಾಜುದ್ಧಿನ ಪಟಕಿ,
ವಿಲಾಸ ಮಣ್ಣೂರ,
ಶಂಭು ಕಲ್ಲೋಳಿಕರ,
ಶ್ರೀಣಿಕ ಅಣ್ಣಾಸಾಹೇಬ ಜಂಗಟೆ,
ಸಮ್ಮೇದ ಸರದಾರ ವರ್ಧಮಾನೆ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ