Latest

ಧಾರವಾಡದಲ್ಲೂ ಎಲ್ಲ ಶಾಲೆಗಳಿಗೆ 2 ದಿನ ರಜೆ

ಧಾರವಾಡದಲ್ಲೂ ಎಲ್ಲ ಶಾಲೆಗಳಿಗೆ 2 ದಿನ ರಜೆ

ಪ್ರಗತಿವಾಹಿನಿ ಸುದ್ದಿ, ಧಾರವಾಡ –

ಭಾರಿ ಮಳೆಯ ಹಿನ್ನೆಲೆಯಲ್ಲಿ ಧಾರವಾಡ ಜಿಲ್ಲೆಯಲ್ಲೂ 2 ದಿನ ಶಾಲೆ ಹಾಗೂ ಪ್ರೌಢ ಶಾಲೆಗಳಿಗೆ 2 ದಿನ ರಜೆ ಘೋಷಿಸಲಾಗಿದೆ.

ಜಿಲ್ಲೆಯಾದ್ಯಂತ ಅಪಾರ ಪ್ರಮಾಣದಲ್ಲಿ ಮಳೆಯಾಗುತ್ತಿದ್ದು, ಮಕ್ಕಳ ಹಿತದೃಷ್ಟಿಯಿಂದ ರಜೆ ನೀಡಲಾಗಿದೆ. ಜಿಲ್ಲೆಯ ಹಲವೆಡೆ ರಸ್ತೆ ಸಂಪರ್ಕ ಕಡಿತಗೊಂಡಿದೆ. ಶಾಲೆಗಳು ಕೆಲವೆಡೆ ಶಿಥಿಲ ಸ್ಥಿತಿ ತಲುಪಿವೆ.

ಹಾಗಾಗಿ ಮಂಗಳವಾರ ಮತ್ತು ಬುಧವಾರ ರಜೆ ಘೋಷಿಸಿ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಗಜಾನನ ಮಣ್ಣಿಕೇರಿ ಪ್ರಗತಿವಾಹಿನಿಗೆ ತಿಳಿಸಿದ್ದಾರೆ.

ಈಗಾಗಲೆ ಉತ್ತರ ಕನ್ನಡ ಜಿಲ್ಲೆಯ ಕೆಲವು ತಾಲೂಕುಗಳಲ್ಲಿ ಮತ್ತು ಬೆಳಗಾವಿ ಹಾಗೂ ಚಿಕ್ಕೋಡಿ ಜಿಲ್ಲೆಯ ಎಲ್ಲ (ರಾಮದುರ್ಗ ತಾಲೂಕು ಹೊರತುಪಡಿಸಿ) ಶಾಲೆಗಳಿಗೆ ರಜೆ ಘೋಷಿಸಲಾಗಿದೆ.

ಇದನ್ನೂ ಓದಿ – ನಾಳೆ, ನಾಡಿದ್ದು ಶಾಲೆಗಳಿಗೆ ರಜೆ

ದಿನ ಭವಿಷ್ಯ: ಪ್ರತಿ ದಿನ ಸಂಕ್ಷಿಪ್ತ ಭವಿಷ್ಯ – ( 06 ಆಗಸ್ಟ್ 2019)

Related Articles

Back to top button