ತಂದೆಯಿಂದಲೇ 21 ವರ್ಷದ ಮಗಳ ಹತ್ಯೆ

ಪ್ರಗತಿ ವಾಹಿನಿ ಸುದ್ದಿ, ನವದೆಹಲಿ: ದೆಹಲಿಯ ಯಮುನಾ ಎಕ್ಸ್‍ಪ್ರೆಸ್ ವೇ ನಲ್ಲಿ ಟ್ರಾಲಿ ಬ್ಯಾಗ್ ಒಂದರಲ್ಲಿ ಸಿಕ್ಕಿದ್ದ ಯುವತಿಯ ಶವ ದಕ್ಷಿಣ ದೆಹಲಿಯ ಆಯುಷಿ ಯಾದವ್ (21) ಎಂಬ ಯುವತಿಯದ್ದು ಎಂದು ತಿಳಿದುಬಂದಿದ್ದು, ಸ್ವತಃ ಆಯುಷಿಯ ತಂದೆ ನಿತೇಶ್ ಯಾದವ್ ತನ್ನ ಮಗಳನ್ನು ಕೊಲೆ ಮಾಡಿದ ಪಾತಕಿ ಎಂಬುದು ತನಿಖೆಯಲ್ಲಿ ಪತ್ತೆಯಾಗಿದೆ.

ಆಯುಷಿ ಯಾದವ್ ಕೆಲ ದಿನಗಳ ಕಾಲ ಮನೆಯಲ್ಲಿ ಹೇಳದೆ ಕೇಳದೆ ಹೊರಟು ಹೋಗಿದ್ದಳು. ನ.17ರಂದು ಆಕೆ ಮನೆಗೆ ವಾಪಸ್ ಬಂದಿದ್ದಳು. ಮಗಳು ಹೇಳದೆ ಕೇಳದೆ ಹೊರಟು ಹೋಗಿದ್ದ ಹಿನ್ನೆಲೆಯಲ್ಲಿ ಕ್ರುದ್ಧನಾಗಿದ್ದ ನಿತೇಶ ಯಾದವ್ ಮನೆಗೆ ಬಂದ ಮಗಳನ್ನು ಕೊಲೆ ಮಾಡಿದ್ದಾನೆ. ಬಳಿಕ ಅದೇ ದಿನ ರಾತ್ರಿ ಆಯುಷಿಯ ಶವವನ್ನು ಟ್ರಾಲಿ ಬ್ಯಾಗ್‍ನಲ್ಲಿ ತುಂಬಿ ಯಮುನಾ ಎಕ್ಸ್‍ಪ್ರೆಸ್ ವೇ ಪಕ್ಕದಲ್ಲಿ ಎಸೆದು ಬಂದಿದ್ದ.

ಶವ ಪತ್ತೆಯಾದ ಬಳಿಕ ಪೊಲೀಸರು ಯುವತಿಯ ಗುರುತು ಪತ್ತೆ ಹಚ್ಚುವ ಸಲುವಾಗಿ ಪ್ರಕಟಣೆ ನೀಡಿದ್ದರು. ಈ ವೇಳೆ ಆಯುಷಿಯ ತಾಯಿ ಮತ್ತು ಸಹೋದರ ಆಯುಷಿಯ ಮೃತದೇಹದ ಗುರುತು ಹಿಡಿದಿದ್ದರು. ಅವರ ವಿಚಾರಣೆ ನಡೆಸಿದಾಗ ತಂದೆ ನಿತೇಶ್ ಯಾದವ್ ಮಗಳನ್ನು ಮರ್ಯಾದಾ ಹತ್ಯೆ ಮಾಡಿದ್ದು ತಿಳಿದು ಬಂದಿದೆ. ಪೊಲೀಸರು ನಿತೇಶ್ ಯಾದವ್‍ನನ್ನು ಬಂಧಿಸಿ ತನಿಖೆ ಮುಂದುವರೆಸಿದ್ದಾರೆ.

ಸಿಎಂ ಜೊತೆ 7ನೇ ವೇತನ ಆಯೋಗದ ಮಹತ್ವದ ಚರ್ಚೆ

https://pragati.taskdun.com/important-discussion-of-7th-pay-commission-with-cm/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button