Latest

26/11 ದಾಳಿಯ ಮಾಸ್ಟ‌ರ್ ಮೈಂಡ್ ತಹವೂರ್‌ ರಾಣಾನನ್ನು ಭಾರತಕ್ಕೆ ಕರೆತಂದ ಅಧಿಕಾರಿಗಳು

ಪ್ರಗತಿವಾಹಿನಿ ಸುದ್ದಿ : 26/11 ಮುಂಬೈ ದಾಳಿಯ ಮಾಸ್ಟ‌ರ್ ಮೈಂಡ್ ಉಗ್ರ ತಹವವೂ‌ರ್ ರಾಣಾನನ್ನು ಅಧಿಕಾರಿಗಳು ಕೊನೆಗೂ ಭಾರತಕ್ಕೆ ಕರೆತಂದಿದ್ದಾರೆ.

2008ರಲ್ಲಿ ಮುಂಬೈನಲ್ಲಿ ನಡೆದಿದ್ದ ಭಯೋತ್ಪಾದಕರ ದಾಳಿಯ ರೂವಾರಿಯೇ ಈ ತಹವೂರ್ ರಾಣಾ. ಭಾರತದ ಮೋಸ್ಟ್ ವಾಂಟೆಡ್ ಈ ಉಗ್ರ. ಪಾಕಿಸ್ತಾನದಿಂದ ಕೆನಡಾಗೆ ಹೋಗಿ ನೆಲೆಸಿದ್ದ ಭಯೋತ್ಪಾದಕ ಕೃತ್ಯದ ಹಿನ್ನೆಲೆಯಲ್ಲಿ ಅಮೆರಿಕಾ ಆತನನ್ನು ಬಂಧಿಸಿತ್ತು. ಸದ್ಯ ಭಾರತ ಸರ್ಕಾರದ ಮನವಿ ಹಾಗೂ ದ್ವಿಪಕ್ಷೀಯ ಮಾತುಕತೆಗಳ ಫಲವಾಗಿ ಅಮೆರಿಕಾ ರಾಣಾನನ್ನು ಗಡಿಪಾರು ಮಾಡಿದೆ. ಈ ಹಿನ್ನೆಲೆ ಈತನನ್ನು ಭಾರತಕ್ಕೆ ಶಿಫ್ಟ್ ಮಾಡಲಾಗಿದೆ. ಅಮೆರಿಕಾದ ಸುಪ್ರೀಂಕೋರ್ಟ್ ಅನುಮತಿ ಪಡೆದುಕೊಂಡು ಈ ನೀಚನನ್ನು ಭಾರತಕ್ಕೆ ಎಳೆದುಕೊಂಡು ಬರಲಾಗಿದೆ.

Home add -Advt

ಕೆನಡಾ ಮೂಲದ ಪಾಕಿಸ್ತಾನಿ ಪ್ರಜೆಯಾಗಿರುವ ರಾಣಾ ನವದೆಹಲಿಯ ಪಾಲಂ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದು, ಈಗ ಇಲ್ಲಿಂದ ಎನ್‌ಐಎ ಪ್ರಧಾನ ಕಚೇರಿಗೆ ಕರೆದೊಯ್ಯಲಾಗುವುದು. ಬಳಿಕ ತಿಹಾ‌ರ್ ಜೈಲಿನಲ್ಲಿರುವ ಹೆಚ್ಚಿನ ಭದ್ರತಾ ವಾರ್ಡ್‌ನಲ್ಲಿ ಇರಿಸಲಾಗುವುದು ಎಂದು ಜೈಲು ಮೂಲಗಳು ತಿಳಿಸಿವೆ.

ದೆಹಲಿ ಪೊಲೀಸ್ ಮೂಲಗಳ ಪ್ರಕಾರ, ದೆಹಲಿ ಪೊಲೀಸರ ಮೂರನೇ ಬೆಟಾಲಿಯನ್ ತಂಡವನ್ನು ತಹವೂರ್ ರಾಣಾಗಾಗಿ ನಿಯೋಜಿಸಲಾಗಿದೆ.

64 ವರ್ಷದ ರಾಣಾ 2008 ರ ಮುಂಬೈ ಭಯೋತ್ಪಾದಕ ದಾಳಿಯ ಪ್ರಮುಖ ಸಂಚುಕೋರರಲ್ಲಿ ಒಬ್ಬರಾದ ಡೇವಿಡ್ ಕೋಲ್ಮನ್ ಹೆಡ್ಲಿ ಅಲಿಯಾಸ್ ದಾವೂದ್ ಗಿಲಾನಿ ಅವರ ನಿಕಟವರ್ತಿ.

Related Articles

Back to top button