*ಈಜಲು ಹೋದ ಮೂವರು ಯುವಕರು ನೀರುಪಾಲು*

ಪ್ರಗತಿವಾಹಿನಿ ಸುದ್ದಿ; ಚಿತ್ರದುರ್ಗ: ಕೆರೆಯಲ್ಲಿ ಈಜಲು ಹೋಗಿದ್ದ ಮೂವರು ಯುವಕರು ನೀರುಪಾಲಾಗಿರುವ ಘಟನೆ ಚಿತ್ರದುರ್ಗದ ಹೊಳಲ್ಕೆರೆ ತಾಲೂಕಿನ ನಂದನಹೊಸೂರು ಗ್ರಾಮದಲ್ಲಿ ನಡೆದಿದೆ.

ಐವರು ಯುವಕರು ಕೆರೆಯಲ್ಲಿ ಈಜಲು ತೆರಳಿದ್ದರು. ಐವರಲ್ಲಿ ಮೂವರು ಯುವಕರು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ನಂದನಹೊಸೂರು ಗ್ರಾಮದ ಗಿರೀಶ್ (18), ಹೊರಕೆರೆದೇವರಪುರದ ಸಂಜಯ್ (18) ಹಾಗೂ ಕಣಿವೆ ಜೋಗಳ್ಳಿ ಗ್ರಾಮದ ಮನು (19) ಮೃತರು.

Home add -Advt

ಪಿಯು ಪರೀಕ್ಷೆ ಮುಗಿಸಿ ರಜೆ ಕಳೆಯಲೆಂದು ಊರಿಗೆ ಬಂದಿದ್ದ ಸ್ನೇಹಿತರೆಲ್ಲ ಸೇರಿಕೊಂಡು ಕೆರೆಯಲ್ಲಿ ಈಜಲು ಹೋಗಿದ್ದ ವೇಳೆ ಈ ದುರಂತ ಸಂಭವಿಸಿದೆ. ಐವರು ಯುವಕರು ಕೆರೆಯಲ್ಲಿ ಇಳಿದಿದ್ದಾರೆ. ಕೆರೆ ಆಳ ಗೊತ್ತಾಗದೇ ನೀರಿಗಿಳಿದಿದ್ದರಿಂದ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಇಬ್ಬರು ಯುವಕರು ಈಜಿ ದಡ ಸೇರಿದ್ದಾರೆ. ಹೊಳಲ್ಕೆರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related Articles

Back to top button