*ಕಮಲ ಬಸದಿಯಲ್ಲಿ 5 ದಿನಗಳ ಧರ್ಮಚಕ್ರ ಆರಾಧನಾ ಮಹೋತ್ಸವ ಆಚರಣೆ: ಸಂಜಯ ಪಾಟೀಲ್*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ; ಬೆಳಗಾವಿಯ ಕೋಟೆ ಆವರಣದಲ್ಲಿರುವ ಐತಿಹಾಸಿಕ ಕಮಲ ಬಸದಿಯಲ್ಲಿ ಇದೇ ಏಪ್ರಿಲ್ 24 ರಿಂದ 28 ರವರೆಗೆ ಇದು ದಿನಗಳ ಕಾಲ ಧರ್ಮಚಕ್ರ ಆರಾಧನಾ ಮಹೋತ್ಸವವನ್ನು ಆಚರಿಸಲಾಗಿತ್ತಿದೆ ಎಂದು ಮಾಜಿ ಶಾಸಕ ಹಾಗೂ ಮಹೋತ್ಸವ ಸಮಿತಿ ಅಧ್ಯಕ್ಷ ಸಂಜಯ ಪಾಟೀಲ ಅವರು ಇಂದಿಲ್ಲಿ ಹೇಳಿದರು.
ಬೆಳಗಾವಿ ನಗರದಲ್ಲಿ ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದ ಅವರು, ಬೆಳಗಾವಿ ನಗರ ಸರ್ವ ಧರ್ಮಗಳ ನೆಲೆ ಬೀಡಾಗಿದೆ. ಇಲ್ಲಿ ಎಲ್ಲ ಧರ್ಮ , ಸಂಪ್ರದಾಯದ ಮಹೋತ್ಸವಗಳು ನಡೆಯುತ್ತವೆ. ಇದೀಗ ವಿಶ್ವ ಶಾಂತಿಗಾಗಿ ಜೈನ ಧರ್ಮದ ಒಂದು ಐತಿಹಾಸಿಕ ಕಾರ್ಯಕ್ರಮ ಬೆಳಗಾವಿಯಲ್ಲಿ ನಡೆಯುತ್ತಿದೆ ಎಂದು ಅವರು ತಿಳಿಸಿದರು.
ಇದೇ ಸಂದರ್ಭದಲ್ಲಿ
ಮಹೋತ್ಸವ ಸಮಿತಿಯ ಕಾರ್ಯದರ್ಶಿ ಹೀರಾಚಂದ ಕಲಮನಿ ಅವರು ಮಾತನಾಡಿ ಏಪ್ರಿಲ್ 24 ರಂದು ಬೆಳಿಗ್ಗೆ ಕಮಲ ಬಸದಿ ಆವರಣದಲ್ಲಿ ಶಾಸಕ ಅಭಯ ಪಾಟೀಲ, ಮಾಜಿ ಶಾಸಕ ವೀರಕುಮಾರ ಪಾಟೀಲ, ಸಂಜಯ ಪಾಟೀಲ, ಅರಿಹಂತ ಉದ್ಯೋಗ ಸಮೂಹದ ಉತ್ತಮ ಪಾಟೀಲ ಮತ್ತು ಅಭಿನಂದನ ಪಾಟೀಲ, ಖ್ಯಾತ ನ್ಯಾಯವಾದಿ ರವಿರಾಜ ಪಾಟೀಲ, ಉದ್ಯಮಿ ಭರತ ಬಾಗಿ ಮೊದಲಾದವರು ಮಹೋತ್ಸವಕ್ಕೆ ಚಾಲನೆ ನೀಡಲಿದ್ದಾರೆ. ಅದರಂತೆ ಏಪ್ರಿಲ 25 ರಂದು ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವೆ ಲಕ್ಷ್ಮೀ ಹೆಬ್ಬಾಳಕರ, ಮರಾಠಾ ಲೈಟ ಇನ್ನಫೆಂಟ್ರಿ ಕಮಾಡಿಂಗ ಆಪಿಸರ್ ಬ್ರಿಗೇಡಿಯರ್ ಜಾಯದೀಪ ಮುಖರ್ಜಿ, ಶಾಸಕರಾದ ರಾಜು ಸೇಠ, ಮಹಾಂತೇಶ ಕೌಜಲಗಿ, ಬಾಬಾಸಾಹೇಬ ಪಾಟೀಲ, ವಿಶ್ವಾಸ ವೈದ್ಯ, ಚೆನ್ನರಾಜ ಹಟ್ಟಿಹೊಳಿ, ಬುಡಾ ಚೇರಮನ ಲಕ್ಷ್ಮಣರಾವ ಚಿಂಗಳೆ ಮೊದಲಾದವರು ಈ ಮಹೋತ್ಸವಕ್ಕೆ ಭೇಟಿ ನೀಡಲಿದ್ದಾರೆ ಎಂದು ತಿಳಿಸಿದರು.
ಏಪ್ರಿಲ್ 26 ರಂದು ಸಂಸದ ಜಗದೀಶ್ ಶೆಟ್ಟರ್, ಕೆ.ಎಲ್.ಇ.ಸಂಸ್ಥೆಯ ಗೌರವಾಧ್ಯಕ್ಷ ಡಾ.ಪ್ರಭಾಕರ ಕೋರೆ, ವಿಧಾನ ಪರಿಷತ್ತ ಸದಸ್ಯ ಲಖನ ಜಾರಕಿಹೊಳಿ, ಮಾಜಿ ಶಾಸಕ ಅನಿಲ ಬೆನಕೆ, ದಕ್ಷಿಣ ಭಾರತ ಜೈನ ಸಭೆಯ ಅಧ್ಯಕ್ಷ ಭಾಲಚಂದ್ರ ಪಾಟೀಲ, ಸಂಜಯ ಶೆಟೆ, ಇವರು ಆಗಮಿಸಲಿದ್ದು ಅಂದು ಸುಮಾರು 500 ಮಕ್ಕಳಿಗೆ ಮೌಂಜಿ ಬಂಧನ ಕಾರ್ಯಕ್ರಮ ನಡೆಯಲಿದೆ ಎಂದರು.
ಏಪ್ರಿಲ್ 27 ರಂದು ಸಾಂಖ್ಯಿಕ ಇಲಾಖೆಯ ಕಾರ್ಯದರ್ಶಿ ಮನೋಜ ಜೈನ, ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ , ಪೋಲಿಸ್ ಆಯುಕ್ತ ಬೊರಸೆ ಭೋಷಣ ಗುಲಾಬರಾವ, ಜಿಲ್ಲಾ ಪೋಲಿಸ ವರಿಷ್ಠಾಧಿಕಾರಿ ಕೆ.ರಾಮರಾಜನ , ಮಹಾನಗರ ಪಾಲಿಕೆ ಆಯುಕ್ತ ಕಾರ್ತಿಕ ಎಂ. ಬುಡಾ ಆಯುಕ್ತ ಸಿ.ಡಬ್ಲು ಶಕೀಲ ಅಹ್ಮದ್ ಇವರು ಆಗಮಿಸಲಿದ್ದು, ಅಂದು ಭವ್ಯ ರಥೋತ್ಸವ ನಡೆಯಲಿದೆ ಎಂದರು.
ಏಪ್ರಿಲ್ 28 ರಂದು ಶಾಸಕ ಗಣೇಶ ಹುಕ್ಕೇರಿ, ಜಿ.ಪಂ .ಸಿಇಓ ರಾಹುಲ ಶಿಂದೆ, ಕರ್ನಲ ಮೊಹಿಂದರಪಾಲ ಸಿಂಗ್, ಕ್ಯಾಂಟೋನಮೆಂಟ್ ಸಿಇಓ ಹರಿವಿಜಯ, ಉದ್ಯಮಿಗಳಾದ ಪಿ.ಪಿ.ದೊಡ್ಡಣ್ಣವರ, ಗೋಪಾಲ ಜಿನಗೌಡ, ಅಪ್ಪಾಸಾಹೇಬ ಕಲಮನಿ, ಧನ್ಯಕುಮಾರ ಕಸ್ತೂರಿ, ಪದ್ಮಶ್ರೀ ಹನಮಣ್ಣವರ ಇವರು ಆಗಮಿಸಲಿದ್ದು ಅಂದು ಕಳಸ ಅಭಿಷೇಕ ಕಾರ್ಯಕ್ರಮ ನಡೆಯಲಿದೆ. ಇದರೊಂದಿಗೆ ಐದು ದಿನಗಳ ಕಾಲ ವಿವಿಧ ಆರಾಧನಾ ಮತ್ತು ಧಾರ್ಮಿಕ ವಿಧಿ ವಿಧಾನಗಳು ನಡೆಯಲಿವೆ. ಈ ಎಲ್ಲ ಕಾರ್ಯಕ್ರಮಗಳು ಆಚಾರ್ಯ ಶ್ರೀ ಧರ್ಮಸೇನ ಮುನಿಗಳ ಸಾನಿಧ್ಯದಲ್ಲಿ ನಡೆಯಲಿವೆ ಎಂದು ಅವರು ತಿಳಿಸಿದರು.
ಮಹೋತ್ಸವ ಸಮಿತಿ ಅಧ್ಯಕ್ಷ ಸುನಿಲ ಹನಮಣ್ಣವರ ಅವರು ಮಾತನಾಡಿ ಕಮಲ ಬಸದಿಯ ಅಭಿವೃದ್ಧಿಗೆ ಎಸರಕಾರ ಅನುದಾನ ನೀಡಿದೆ. ಪ್ರಸ್ತುತ ಸರಕಾರ 2. ಕೋಟಿ 75 ಲಕ್ಷ ರೂ . ಅನುದಾನ ನೀಡಿದ್ದು, ಮುಂಬರುವ ದಿನಗಳಲ್ಲಿ ಇನ್ನಷ್ಟು ಅನುದಾನ ಬಿಡುಗಡೆಯಾಗಲಿದೆ.ಈ ಅನುದಾನದಲ್ಲಿ ಹಂಪಿ ಮಾದರಿಯಲ್ಲಿ ಧ್ವನಿ ಬೆಳಕು ವ್ಯವಸ್ಥೆ ಮಾಡಲಾಗುವುದು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಭರತೇಶ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ವಿನೋದ ದೊಡ್ಡಣ್ಣವರ, ಮಹೋತ್ಸವ ಸಮಿತಿಯ ಉಪಾಧ್ಯಕ್ಷ ರವಿರಾಜ ಪಾಟೀಲ, ಪದಾಧಿಕಾರಿಗಳಾದ ಸನ್ಮತಿ ಕಸ್ತೂರಿ, ಕುಂತಿನಾಥ ಕಲಮನಿ , ಪದ್ಮರಾಜ ವೈಜನ್ನವರ ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದರು.



