Karnataka NewsLatest

ಗಣೇಶ ಮಂಡಳಗಳಿಗೆ ಡಾ. ಸೋನಾಲಿ ಸರ್ನೋಬತ್ ಭೇಟಿ: ವೀರ ಸಾವರ್ಕರ್ ಅಭಿಯಾನಕ್ಕೆ ಚಾಲನೆ

ಪ್ರಗತಿವಾಹಿನಿ ಸುದ್ದಿ, ಖಾನಾಪುರ: ಬಿಜೆಪಿ ನಾಯಕಿ ಡಾ. ಸೋನಾಲಿ ಸರ್ನೋಬತ್ ಹಾಗೂ ಶ್ರೀಜ್ಯೋತ್ ಸರ್ನೋಬತ್ ಮತ್ತು ಬಿಜೆಪಿ ಕಾರ್ಯಕರ್ತರು ಸಾರ್ವಜನಿಕ ಗಣೇಶೋತ್ಸವ ಮಂಡಲಗಳಿಗೆ ಭೇಟಿ ನೀಡಿ ವೀರ ಸಾವರ್ಕರ್ ಅಭಿಯಾನ  ಪ್ರಾರಂಭಿಸಿದರು.

Home add -Advt

ನಿಂಗಾಪುರ ಗಲ್ಲಿಯಲ್ಲಿ ಅಧ್ಯಕ್ಷ ದೀಪಕ ಚೌಗುಲೆ, ಮೇದಾರ ಗಲ್ಲಿಯಲ್ಲಿ ಗುರುರಾಜ ಮೇದಾರ, ದುರ್ಗಾ ನಗರದಲ್ಲಿ ಅಮೃತ್ ಪಾಟೀಲ್,  ಬಜಾರ್ ಗಲ್ಲಿ- ಮಹೇಶ ಪಾಟೀಲ್, ಚೌರಾಶಿ ದೇವಿ ಮಂಡಳದ ಅಪ್ಪಯ್ಯ ಕೊಡೊಳ್ಳಿ ಅವರಿಗೆ ಸಾವರ್ಕರ್ ಫೋಟೊಗಳನ್ನು ನೀಡಲಾಯಿತು.

ಡಾ. ಸರ್ನೋಬತ್ ಅವರು ವೀರ್ ಸಾವರ್ಕರ್ ಅವರ ಫೋಟೋವನ್ನು ವಿಸರ್ಜನಾ ದಿನ, ಎಂದರೆ  ಅನಂತ ಚತುರ್ದಶಿವರೆಗೆ ಇಡಲು ವಿನಂತಿಸಿದರು.

ಕರಿನೀರಿನ ಶಿಕ್ಷೆ ಅನುಭವಿಸಿದ ವೀರ್ ಸಾವರ್ಕರ್ ಅವರು ದೇಶಭಕ್ತರಾಗಿದ್ದು  ಒಬ್ಬ ವ್ಯಕ್ತಿಯಿಂದ ಅಪಹಾಸ್ಯಕ್ಕೊಳಗಾಗಿದ್ದಾರೆ. ಅವರ ಫೋಟೋಗಳನ್ನು ಹಂಚುವ ಮೂಲಕ ನಿಜವಾದ ಸ್ವಾತಂತ್ರ್ಯ ಹೋರಾಟದ ಇತಿಹಾಸ ತಿಳಿಸುವ ಮತ್ತು ಸ್ವಾತಂತ್ರ್ಯದ ಮಹತ್ವ ಬಿಂಬಿಸುವ ನಿಟ್ಟಿನಲ್ಲಿ ಈ ಫೋಟೊಗಳನ್ನು ವಿತರಿಸುತ್ತಿರುವುದಾಗಿ ಡಾ. ಸೋನಾಲಿ ಸರ್ನೋಬತ್ ಹೇಳಿದರು.

ಸಿಬಿಐ ಅಧಿಕಾರಿ ಆತ್ಮಹತ್ಯೆ; ಸುಳ್ಳು ಕೇಸು ದಾಖಲಿಸಲು ಒತ್ತಡ ಆರೋಪ

Related Articles

Back to top button