ಬಿಜೆಪಿಯಲ್ಲಿ ದೊಡ್ಡ ಸಂಚಲನ : ಈಶ್ವರಪ್ಪ ವಿರುದ್ಧ ಶಿಸ್ತು ಕ್ರಮ ಸಾಧ್ಯತೆ
ಪ್ರಗತಿವಾಹಿನಿ ಸುದ್ದಿ, ಬೆಂಗಳೂರು– ಸಚಿವಸ್ಥಾನ ನೀಡದಿರುವ ಹಿನ್ನೆಲೆಯಲ್ಲಿ ಪ್ರತಿಭಟನಾರ್ಥವಾಗಿ ವಿಧಾನಮಂಡಳದ ಅಧಿವೇಶನಕ್ಕೆ ಹೋಗುತ್ತಿಲ್ಲ ಎನ್ನುವ ಬಿಜೆಪಿಯ ಹಿರಿಯ ನಾಯಕ, ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿಕೆ ಪಕ್ಷದಲ್ಲಿ ಭಾರೀ ಸಂಚಲನ ಮೂಡಿಸಿದೆ.
ಹಿರಿಯ ನಾಯಕರೊಬ್ಬರು ಅಧಿವೇಶನಕ್ಕೆ ಹೋಗದೆ ಪಕ್ಷದ ವಿರುದ್ಧ ಈ ರೀತಿ ಸಿಡಿದೆದ್ದಿರುವುದು ಮತ್ತು ಬಹಿರಂಗವಾಗಿ ಹೇಳಿಕೆ ನೀಡಿರುವುದು ಪಕ್ಷಕ್ಕೆ ಭಾರೀ ಮುಜುಗರಕ್ಕೆ ಕಾರಣವಾಗಿದೆ. ಶಿಸ್ತಿನ ಪಕ್ಷವೆಂದೇ ಕರೆಸಿಕೊಳ್ಳುವ, ಕೇಂದ್ರಾಡಳಿತ, ರಾಷ್ಟ್ರೀಯ ಪಕ್ಷದ ವಿರುದ್ಧ ಮಾಜಿ ಸಚಿವರೊಬ್ಬರು ಈ ರೀತಿ ಹೇಳಿಕೆ ನೀಡಿರುವುದು ಮುಖ್ಯಮಂತ್ರಿಗಳಿಗೆ ಹಾಗೂ ಪಕ್ಷದ ರಾಜ್ಯಾಧ್ಯಕ್ಷರಿಗೆ ಇರುಸುಮುರಿಸನ್ನುಂಟು ಮಾಡಿದೆ.
ಸಚಿವಸ್ಥಾನ ಸಿಗದವರೆಲ್ಲರೂ ಇದೇ ರೀತಿ ಅಸಮಾಧಾನದಿಂದ ಸದನದಿಂದ ದೂರ ಉಳಿದರೆ ಸರಕಾರ ಮತ್ತು ಬಿಜೆಪಿ ವಿರೋಧ ಪಕ್ಷದೆದುರು ಹೇಗೆ ತಲೆ ಎತ್ತಿ ಸಮರ್ಥಿಸಿಕೊಳ್ಳಲು ಸಾಧ್ಯ ಎನ್ನುವ ಪ್ರಶ್ನೆ ಎದ್ದಿದೆ. ಈಶ್ವರಪ್ಪ ಹೇಳಿಕೆ ಕಾಂಗ್ರೆಸ್ ಪಕ್ಷಕ್ಕೆ ದೊಡ್ಡ ಅಸ್ತ್ರ ಸಿಕ್ಕಿದಂತಾಗಿದೆ.
ಗುತ್ತಿಗೆದಾರನ ಆತ್ಮಹತ್ಯೆ ಪ್ರಕರಣದಲ್ಲಿ ಸಿಲುಕಿಕೊಂಡಿದ್ದ ಈಶ್ವರಪ್ಪನವರನ್ನು ಬಚಾವ್ ಮಾಡಲಾಗಿದೆ. ಆದರೆ ಈಗ ಅವರು ಪಕ್ಷವನ್ನೇ ಇಕ್ಕಟ್ಟಿಗೆ ಸಿಲುಕಿಸುವ ಕೆಲಸ ಮಾಡಿರುವುದು ಪಕ್ಷಕ್ಕೆ ದೊಡ್ಡ ಹಿನ್ನಡೆಯಾಗಿದೆ.
ಈ ಹಿನ್ನೆಲೆಯಲ್ಲಿ ಈಶ್ವರಪ್ಪ ವಿರುದ್ಧ ಪಕ್ಷ ಶಿಸ್ತು ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ.
ಸಚಿವ ಸ್ಥಾನ ಸಿಗದಿರುವುದಕ್ಕೇ ಪ್ರತಿಭಟಿಸಿ ನಾನು ಸದನಕ್ಕೆ ಹೋಗುತ್ತಿಲ್ಲ ; ನೇರವಾಗಿ ಹೇಳಿಕೆ ನೀಡಿದ ಕೆ.ಎಸ್.ಈಶ್ವರಪ್ಪ
https://pragati.taskdun.com/politics/k-s-eshwarappareactionvidhanamandala-sessionabsence/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ