Latest

ಭಾರತ ಜೋಡೋ ಯಾತ್ರೆ; ತಾಯಿಯ ಶೂ ಲೇಸ್ ಕಟ್ಟಿ ಕೊಟ್ಟ ರಾಹುಲ್ ಗಾಂಧಿ

ಪ್ರಗತಿವಾಹಿನಿ ಸುದ್ದಿ; ಮಂಡ್ಯ: ಸಂಸದ ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆಯುತ್ತಿದ್ದ ಭಾರತ್ ಜೋಡೋ ಯಾತ್ರೆಯಲ್ಲಿ ಇಂದು ಕಾಂಗ್ರೆಸ್ ಅಧ್ಯಕ್ಷ ಸೋನಿಯಾ ಗಾಂಧಿ ಭಾಗವಹಿಸಿ ರಾಜ್ಯ ಕಾಂಗ್ರೆಸ್ ನಾಯಕರ ಉತ್ಸಾಹ, ಹುರುಪು ಹೆಚ್ಚಿಸಿದ್ದಾರೆ. ಪಾದಯಾತ್ರೆಯುದ್ದಕ್ಕೂ ಮಗ ರಾಹುಲ್ ಗೆ ಸಿಗುತ್ತಿರುವ ಬೆಂಬಲ ಕಂಡು ಸೋನಿಯಾ ಗಾಂಧಿ ಸಂಪತಪಟ್ಟಿದ್ದಾರೆ.

ಭಾರತ್ ಜೋಡೋ ಯಾತ್ರೆ ಮಂಡ್ಯ ಜಿಲ್ಲೆಯಲ್ಲಿ ಹಲವು ಗ್ರಾಮಗಳಲ್ಲಿ ಸಾಗಿದ್ದು, ಪಾದಯಾತ್ರೆ ವೇಳೆ ಸೋನಿಯಾ ಗಾಂಧಿ ಅವರ ಶೂ ಲೇಸ್ ಕಟ್ಟಿ ಮಗ ರಾಹುಲ್ ಗಾಂಧಿ ಗಮನ ಸೆಳೆದಿದ್ದಾರೆ.

ಮಂಡ್ಯ ಜಿಲ್ಲೆಯ ಚೀಣ್ಯ ಗ್ರಾಮದಿಂದ ರಾಹುಲ್ ಗಾಂಧಿಯವರ ಜೊತೆಯಲ್ಲಿ ತಾಯಿ ಸೋನಿಯಾ ಗಾಂಧಿಯವರು ಹೆಜ್ಜೆ ಹಾಕಿದ್ದು, ರಾಜ್ಯ ಕಾಂಗ್ರೆಸ್ ನಾಯಕರಾದ ಸಿದ್ದರಾಮಯ್ಯ, ಡಿಕೆ ಶಿವಕುಮಾರ್, ರಣದೀಪ್ ಸುರ್ಜೆವಾಲಾ, ಕೆ.ಸಿ.ವೇಣುಗೋಪಾಲ್ ಸೇರಿದಂತೆ ಹಲವು ನಾಯಕರು ಭಾಗಿಯಾದರು. ಕರಡಿಯಾ ಗ್ರಾಮದವರೆಗೆ ನಡೆದು ಸಾಗಿದರು.

Home add -Advt

ಪಾದಯಾತ್ರೆಯುದ್ದಕ್ಕೂ ಹಳ್ಳಿ ಹಳ್ಳಿಗಳಿಂದ ನೆರೆದಿದ್ದ ಜನರು, ಕಳಸ ಹೊತ್ತ ಮಹಿಳೆಯರು, ಮಕ್ಕಳು ಸೋನಿಯಾ ಗಾಂಧಿಯವರನ್ನ ಕಂಡು ಪುಳಕಿತಗೊಂಡು ಅವರೊಂದಿಗೆ ಹೆಜ್ಜೆ ಹಾಕಿದರು.

ಪಾದಯಾತ್ರೆ ವೇಳೆ ಸೋನಿಯಾ ಗಾಂಧಿಯವರ ಶೂ ಲೇಸ್ ಬಿಚ್ಚಿದ್ದು, ಈ ವೇಳೆ ಸ್ವತ: ರಾಹುಲ್ ಗಾಂಧಿ ತಮ್ಮ ತಾಯಿಯ ಶೂ ಲೇಸ್ ಕಟ್ಟಿ ಗಮನ ಸೆಳೆದರು.

ಕಾಂಗ್ರೆಸ್ ‘ಭಾರತ್ ಜೋಡೋ ಯಾತ್ರೆ’ಗೆ BJPಯಿಂದ ಪರ್ಯಾಯ ಯಾತ್ರೆ

https://pragati.taskdun.com/politics/cm-basavaraj-bommaibjp-yatrebharat-jodo-yatrereaction/

Related Articles

Back to top button