Latest

ಹಿಂದೂ ಕಾರ್ಯಕರ್ತರ ಮೇಲೆ ಹಲ್ಲೆ; CPI ಅಮಾನತು

ಪ್ರಗತಿವಾಹಿನಿ ಸುದ್ದಿ; ಬಾಗಲಕೋಟೆ: ಕೆರೂರು ಗಲಾಟೆ ಪ್ರಕರನ ಸಂಬಂಧ ಹಿಂದೂ ಕಾರ್ಯಕರ್ತರ ಮೇಲೆ ಹಲ್ಲೆ ನಡೆಸಿದ್ದ ಆರೋಪಕ್ಕೆ ಸಂಬಂಧಿಸಿದಂತೆ ಸಿಪಿಐ ಓರ್ವರನ್ನು ಅಮಾನತುಗೊಳಿಸಿ ಆದೇಶ ಹೊರಡಿಸಲಾಗಿದೆ.

ಸೆ.6ರಂದು ಗಣೇಶ ಮೂರ್ತಿ ವಿಸರ್ಜನೆ ವೇಳೆ ಬಾಗಲಕೋಟೆ ಜಿಲ್ಲೆಯ ಕೆರೂರು ಗ್ರಾಮದಲ್ಲಿ ಗಲಾಟೆಯಾಗಿತ್ತು. ಪ್ರಕರಣ ಸಂಬಂಧ ಹಿಂದೂ ಸಂಘಟನೆ ಕಾರ್ಯಕರ್ತರನ್ನು ಬಂಧಿಸಿದ್ದ ಪೊಲೀಸರು, ಅವರನ್ನು ಠಾಣೆಗೆ ಕರೆದೊಯ್ದು ಚಿತ್ರಹಿಂಸೆ ನೀಡಿದ್ದರು. ಬಾದಾಮಿ ಠಾಣೆ ಸಿಪಿಐ ಕರೆಪ್ಪ ಬನ್ನಿ ವಿರುದ್ಧ ಸಿಡಿದೆದ್ದಿದ್ದ ಹಿಂದೂ ಜಾಗರಣಾ ವೇದಿಕೆ ಕಾರ್ಯಕರ್ತರು ಜಗದೀಶ್ ಕಾರಂತ ಎಂಬುವವರ ನೇತೃತ್ವದಲ್ಲಿ ಕೆರೂರು ಚಲೋ ಪ್ರತಿಭಟನೆ ನಡೆಸಿದ್ದರು. ಅಲ್ಲದೇ ಸಿಪಿಐ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದ್ದರು.

Home add -Advt

ಇದೀಗ ಹಿಂದೂ ಸಂಘಟನೆಗಳ ಒತ್ತಡಕ್ಕೆ ಮಣಿದು ಸಿಪಿಐ ಕರೆಪ್ಪ ಬನ್ನಿಯವರನ್ನು ಅಮಾನತುಗೊಳಿಸಿ ಬಾಗಲಕೋಟೆ ಎಸ್ ಪಿ ಜಯಪ್ರಕಾಶ್ ಆದೇಶ ಹೊರಡಿಸಿದ್ದಾರೆ.

ಗಂಧದಗುಡಿ ನಮ್ಮನ್ನೆಲ್ಲ ಹೊಸತೊಂದು ಲೋಕಕ್ಕೆ ಕರೆದೊಯ್ಯಲಿದೆ; ಸಿಎಂ ಬೊಮ್ಮಾಯಿ

https://pragati.taskdun.com/politics/gandhadaguditrailer-releasecm-basavaraj-bommai/

Related Articles

Back to top button