Latest

ಭಾರತ ಹಾವಾಡಿಗರ ದೇಶ ಎಂಬಂತೆ ಬಿಂಬಿಸಿದ ಸ್ಪೇನ್ ನ ಪತ್ರಿಕೆ

ಪ್ರಗತಿವಾಹಿನಿ ಸುದ್ದಿ, ಮುಂಬೈ: ಭಾರತೀಯರೆಂದರೆ ಹಾವಾಡಿಗರು ಎಂಬಂತೆ ಸ್ಪೇನ್ ನ ಪತ್ರಿಕೆಯೊಂದು ಬಿಂಬಿಸಿದೆ.

ಸ್ಪ್ಯಾನಿಷ್ ಪತ್ರಿಕೆಯ ಈ ಕ್ರಮ ಭಾರೀ ಟೀಕೆಗೆ ಗುರಿಯಾಗಿದೆ. ಪತ್ರಿಕೆಯಲ್ಲಿ “ಭಾರತೀಯ ಆರ್ಥಿಕತೆಯ ಸಮಯ” ಎಂಬ ಶೀರ್ಷಿಕೆಯೊಂದಿಗೆ ಪ್ರಕಟವಾದ  ವ್ಯಂಗ್ಯಚಿತ್ರದಲ್ಲಿ ಭಾರತದ ಆರ್ಥಿಕತೆಯನ್ನು ಬಿಂಬಿಸುವ ರೀತಿ ಟೀಕಾಸ್ಪದವಾಗಿದೆ. ಹಾವಾಡಿಗನೊಬ್ಬ ಪುಂಗಿ ಊದಿ ಹಾವಾಡಿಸುವ ಮೂಲಕ ಗ್ರಾಫ್ ಮೇಲಕ್ಕೇರುತ್ತಿರುವುದನ್ನು ಚಿತ್ರಿಸಲಾಗಿದೆ.

Home add -Advt

ಭಾರತವನ್ನು ಪ್ರತಿನಿಧಿಸಲು ಹಾವು ಮೋಡಿ ಮಾಡುವವರ ವ್ಯಂಗ್ಯಚಿತ್ರವನ್ನು ಬಳಸಿರುವುದನ್ನು ಝೆರೋಧಾ ಸಿಇಒ ನಿತಿನ್ ಕಾಮತ್ ಕಟುವಾಗಿ ಟೀಕಿಸಿದ್ದಾರೆ. ಅವರು ಟ್ವಿಟರ್‌ನಲ್ಲಿ ಲಾ ವ್ಯಾನ್‌ಗಾರ್ಡಿಯಾದ ಮುಖಪುಟದ ಚಿತ್ರವನ್ನು ಹಂಚಿಕೊಂಡಿದ್ದಾರೆ. ಇದು ‘ಅವಮಾನಕರ’ ಎಂದು ಅವರು ಪ್ರತಿಕ್ರಿಯಿಸಿದ್ದಾರೆ. 

ಹಲವರು ಈ ವ್ಯಂಗ್ಯಚಿತ್ರದ ಬಗ್ಗೆ ಖಾರ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದು “ಸ್ಪೇನ್ ಜನರಿಗಿನ್ನೂ ಜಗತ್ತಿನ ಜ್ಞಾನವಿದ್ದಂತಿಲ್ಲ. ಭಾರತ ಮುಂದುವರಿದಿರುವುದನ್ನು ಇಡೀ ಜಗತ್ತೇ ವೀಕ್ಷಿಸುತ್ತಿದೆ.” ಎಂದು ಹೇಳಿದ್ದಾರೆ.

ಮತಾಂತರ ನಿಷೇಧ ಕಾಯ್ದೆ ಜಾರಿ ಬಳಿಕ ಮೊದಲ ಪ್ರಕರಣ; ಆರೋಪಿ ಬಂಧನ

Related Articles

Back to top button