ಪಾಕಿಸ್ತಾನ ಭಾರತಕ್ಕೆ ಶರಣಾಗುತ್ತಿರುವ ಚಿತ್ರ ಹಂಚಿಕೊಂಡ ತಾಲಿಬಾನ್ ನಾಯಕ; ‘ನಾಚಿಕೆಗೇಡಿನ ಪುನರಾವರ್ತನೆ’ ಎಚ್ಚರಿಕೆ
ಪ್ರಗತಿವಾಹಿನಿ ಸುದ್ದಿ, ಕಾಬೂಲ್: ತಾಲಿಬಾನ್ ನಾಯಕ ಅಹ್ಮದ್ ಯಾಸಿರ್ 1971 ರ ಯುದ್ಧದಲ್ಲಿ ಪಾಕಿಸ್ತಾನ ಭಾರತಕ್ಕೆ ಶರಣಾಗುತ್ತಿರುವ ಚಿತ್ರವನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ.
“ಇದು ಅಫ್ಘಾನಿಸ್ತಾನ, ಹೆಮ್ಮೆಯ ಸಾಮ್ರಾಜ್ಯಗಳ ಪಾಲಿನ ಸ್ಮಶಾನ. ನಮ್ಮ ಮೇಲೆ ಮಿಲಿಟರಿ ದಾಳಿಯ ಬಗ್ಗೆ ಯೋಚಿಸಬೇಡಿ, ಹಾಗೊಂದು ವೇಳೆ ಪ್ರಯತ್ನಿಸಿದರೆ, ಭಾರತದೊಂದಿಗಿನ ಮಿಲಿಟರಿ ಒಪ್ಪಂದದ ನಾಚಿಕೆಗೇಡಿನ ಪುನರಾವರ್ತನೆಯಾಗುತ್ತದೆ” ಎಂದು ತಾಲಿಬಾನ್ ನಾಯಕ ಟ್ವೀಟ್ ನಲ್ಲಿ ಎಚ್ಚರಿಕೆ ನೀಡಿದ್ದಾರೆ.
ಇದು ಎರಡನೇ ಜಾಗತಿಕ ಯುದ್ಧದ ನಂತರ ನಡೆದ ಅತಿದೊಡ್ಡ ಮಿಲಿಟರಿ ಶರಣಾಗತಿಯಾಗಿದ್ದು, ಪಾಕಿಸ್ತಾನದ ಸೇನೆಯ 93ಸಾವಿರ ಸೈನಿಕರು ಭಾರತೀಯ ಪಡೆಗಳ ಮುಂದೆ ತಮ್ಮ ಶಸ್ತ್ರಾಸ್ತ್ರಗಳನ್ನು ತ್ಯಜಿಸಿದ್ದರು. ಬಾಂಗ್ಲಾದೇಶವನ್ನು ವಿಮೋಚನೆಗೊಳಿಸಿ ಹೊಸ ರಾಷ್ಟ್ರಕ್ಕೆ ಜನ್ಮ ನೀಡಿದ್ದರು.
1971 ರ ಭಾರತ-ಪಾಕ್ ಯುದ್ಧ ಪಾಕಿಸ್ತಾನದ ಕಡೆಯಿಂದಲೇ ಪ್ರಾರಂಭವಾಗಿತ್ತು. ಹೆಚ್ಚಿನ ಸಂಖ್ಯೆಯ ಭಾರತೀಯ ವಾಯುಪಡೆ ನೆಲೆಗಳ ಮೇಲೆ ಪೂರ್ವಭಾವಿ ದಾಳಿಗಳನ್ನು ಪಾಕ್ ಪ್ರಾರಂಭಿಸಿತ್ತು. ಈ ಅಪ್ರಚೋದಿತ ದಾಳಿಗಳಿಗೆ ಭಾರತೀಯ ರಕ್ಷಣಾ ಪಡೆಗಳು ಪಶ್ಚಿಮ ಮತ್ತು ಪೂರ್ವ ಭಾಗಗಳಲ್ಲಿ, ಭೂಮಿ, ಸಮುದ್ರ ಮತ್ತು ಗಾಳಿಯ ಮೇಲೆ ತ್ವರಿತ ಪ್ರತಿಕ್ರಿಯೆ ನಡೆಸಿ ಪಾಕಿಸ್ತಾನಕ್ಕೆ ಪಾಠ ಕಲಿಸಿದ್ದರು. ಅನಂತರದಲ್ಲಿ ಪಾಕಿಸ್ತಾನ ಭಾರತಕ್ಕೆ ಶರಣಾಗತವಾಗಿತ್ತು.
ಈ ಅರ್ಧ ಶತಮಾನದ ಘಟನೆಯನ್ನು ಮತ್ತೆ ಪಾಕಿಸ್ತಾನಕ್ಕೆ ನೆನಪಿಸಿ ಜಂಘಾಬಲ ಉಡುಗಿಸುವ ಪ್ರಯತ್ನವನ್ನು ಅಪ್ಘಾನಿಸ್ಥಾನದ ಸಚಿವ ಮಾಡಿದ್ದಾರೆ.
*ಏಕಾಏಕಿ ಸ್ಫೋಟಗೊಂಡ ಲಾರಿ ಟೈರ್; ಚಾಲಕ ಸ್ಥಳದಲ್ಲೇ ಸಾವು*
https://pragati.taskdun.com/tumakurulorry-tire-blastdriver-death/
ಉಕ್ರೇನ್ ರಾಕೆಟ್ ದಾಳಿಗೆ 63 ರಷ್ಯಾ ಸೈನಿಕರು ಬಲಿ
https://pragati.taskdun.com/63-russian-soldiers-killed-in-ukraine-rocket-attack/
ವಾಹನ ಚಲಾಯಿಸುವಾಗ ಮೊಬೈಲ್ ಬಳಕೆ; ಪ್ರಾಣ ತೆತ್ತವರೆಷ್ಟು ಗೊತ್ತೇ?
https://pragati.taskdun.com/use-of-mobile-while-driving-do-you-know-enough-to-take-your-life/
*ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಕ್ಷೇತ್ರ ವ್ಯಾಪ್ತಿಯ ಗೆಜೆಟ್ ಪ್ರಕಟ*
https://pragati.taskdun.com/zptaluk-panchayatgazettestate-govt/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ