Latest

ಗರ್ಭಿಣಿಯಾಗಿದ್ದೇ ಮುಳುವಾಯ್ತು ನವ ವಿವಾಹಿತೆ ಪಾಲಿಗೆ

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು: ‘ಸಂಶಯಾತ್ಮಾ ವಿನಶ್ಯತಿ’ ಎಂಬ ಮಾತಿಗೆ ಇಲ್ಲೊಬ್ಬ ಪತಿಮಹಾರಾಯ ಉದಾಹರಣೆಯಾಗಿದ್ದಾನೆ. ಪತ್ನಿಯ ಗರ್ಭದ ಕುಡಿಯನ್ನೇ ಸಂದೇಹದಿಂದ ಕಂಡ ಈತ ಗರ್ಭಿಣಿ ಪತ್ನಿಯನ್ನು ಉಸಿರುಗಟ್ಟಿಸಿ ಕೊಂದ ಆರೋಪಡಿ ಬಂಧಿಯಾಗಿದ್ದಾನೆ.

ಬೆಂಗಳೂರಿನ ತಾವರೆಕೆರೆಯ ಸುಭಾಷನಗರದ ಅಪಾರ್ಟ್ ಮೆಂಟ್ ಒಂದರಲ್ಲಿ ಈ ಘಟನೆ ನಡೆದಿದೆ.

ನಾಜ್ (22) ಕೊಲೆಯಾದ ಮಹಿಳೆ. ಈಕೆಯ ಪತಿ ನಾಸೀರ್ ಹುಸೇನ್  ಕೊಲೆ ಆರೋಪಿ. ನಾಸೀರ್ ಗೆ ತಂದೆ- ತಾಯಿ ಇರಲಿಲ್ಲ. ಆತನನ್ನು ಪ್ರೀತಿಸಿ, ಬರಿ ಆರು ತಿಂಗಳ ಹಿಂದಷ್ಟೇ ತನ್ನ ತಂದೆ- ತಾಯಿಯನ್ನು ಒಪ್ಪಿಸಿ ನಾಸೀರ್ ನೊಂದಿಗೆ ನಾಜ್ ವಿವಾಹವಾಗಿದ್ದರು.

ಇತ್ತೀಚೆಗೆ ಗರ್ಭಿಣಿಯಾಗಿದ್ದ ನಾಜ್ ಪತ್ನಿಯ ಮೇಲೆ ಅನುಮಾನ ವ್ಯಕ್ತಪಡಿಸಲಾರಂಭಿಸಿದ್ದ. ಗರ್ಭದಲ್ಲಿರುವುದು ತನ್ನ ಮಗುವಲ್ಲ ಎಂದು ತಗಾದೆ ಎತ್ತುತ್ತಿದ್ದ.

ಇದರಿಂದ ನಾಜ್ ಕೂಡ ಬೇಸತ್ತಿದ್ದು ಏಕಾಏಕಿ ಆಕೆಯ ಸಾವು ಸಂಭವಿಸಿದೆ. ಪತಿ ನಾಸೀರ್ ಉಸಿರುಗಟ್ಟಿಸಿ ಕೊಲೆಗೈದಿದ್ದಾಗಿ ಪೊಲೀಸರ ಪ್ರಾಥಮಿಕ ಮಾಹಿತಿಯಿಂದ ತಿಳಿದುಬಂದಿದ್ದು ಪ್ರಕರಣದ ವಿಚಾರಣೆ ನಡೆದಿದೆ.

*ಸ್ಯಾಂಟ್ರೋ ರವಿ ವಿರುದ್ಧ ಮತ್ತೊಂದು ಕೇಸ್ ದಾಖಲು*

https://pragati.taskdun.com/santro-ravione-more-case-filemysore/

 ಸೆಕ್ಸಿ ಚಾಟ್ ವಿವಾದದಲ್ಲಿ ಪಾಕ್ ಕ್ರಿಕೆಟಿಗ ಬಾಬರ್ ಅಝಂ

https://pragati.taskdun.com/pakistani-cricketer-babar-azam-in-the-sexy-chat-controversy/

ತಂದೆಯ ಸಾಲಕ್ಕೆ ಮಗನೂ ಬಾಧ್ಯಸ್ಥ: ಮರು ಪಾವತಿಗೆ ಹೈಕೋರ್ಟ್ ಆದೇಶ

https://pragati.taskdun.com/son-also-liable-for-fathers-debt-high-court-orders-repayment/

 

 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button