Latest

ಇನ್ನು ಮುಂದೆ ಲೈಸನ್ಸ್ ಇರುವ ಬಂದೂಕು ಪೊಲೀಸ್ ಠಾಣೆಯಲ್ಲಿ ಇರಿಸಿಕೊಳ್ಳುವಂತಿಲ್ಲ

ಪ್ರಗತಿವಾಹಿನಿ ಸುದ್ದಿ, ತಿರುವನಂತನಪುರಂ: ಇನ್ನು ಮುಂದೆ ಲೈಸನ್ಸ್ ಹೊಂದಿದ ಬಂದೂಕನ್ನು ಪೊಲೀಸ್ ಠಾಣೆಯಲ್ಲಿ ಒತ್ತೆ ಇರಿಕೊಳ್ಳುವಂತಿಲ್ಲ ಎಂದು ಕೇರಳ ಹೈಕೋರ್ಟ್‌ ಮಹತ್ವದ ತೀರ್ಪು ನೀಡಿದೆ.

ಇತ್ತೀಚೆಗೆ ನಡೆದ ಸ್ಥಳೀಯ ಆಡಳಿತ ಸಂಸ್ಥೆಗಳ ಚುನಾವಣೆಯ ನಂತರ ಬದಿಯಡ್ಕ ಉಕ್ಕಿನಡ್ಕ ಸಮೀಪದ ಕೃಷಿಕ ಏನಂಕೂಡ್ಲು ಸುಬ್ರಹ್ಮಣ್ಯ ಅವರು ತಮ್ಮ ಕೋವಿ ಹಿಂಪಡೆಯಲು ಪಡೆಯಲು ಬದಿಯಡ್ಕ ಪೊಲೀಸ್ ಠಾಣೆಯನ್ನು ಸಂಪರ್ಕಿಸಿದಾಗ   ಅದನ್ನು ಹಿಂತಿರುಗಿಸಲು ಪೊಲೀಸರು ನಿರಾಕರಿಸಿದ ಹಿನ್ನೆಲೆಯಲ್ಲಿ ಅವರು ಕೇರಳ ರಾಜ್ಯ ಹೈಕೋರ್ಟ್‌ ಮೊರೆಹೋಗಿದ್ದರು. ಪ್ರಕರಣದ ವಿಚಾರಣೆ ನಡೆಸಿದ ಹೈಕೋರ್ಟ್ ಈ ರೀತಿ ತೀರ್ಪು ನೀಡಿದೆ.

ಚುನಾವಣೆ ಸಂದರ್ಭದಲ್ಲಿ ಪರವಾನಗಿ ಹೊಂದಿದ ಬಂದೂಕನ್ನು ಠಾಣೆಯಲ್ಲಿ ಒತ್ತೆ ಇಟ್ಟುಕೊಳ್ಳುವ ಅಧಿಕಾರ ಪೊಲೀಸರಿಗಿಲ್ಲ. ಕ್ರಿಮಿನಲ್‌ ಕೇಸುಗಳ ಹಿನ್ನೆಲೆಯಿದ್ದು ಲೈಸನ್ಸ್ ಹೊಂದಿದ ಕೋವಿಗಳನ್ನು ಮಾತ್ರ ಚುನಾವಣೆ  ಚುನಾವಣೆ ವೇಳೆ ಒತ್ತೆ ಇಟ್ಟುಕೊಳ್ಳಲು ಅನುಮತಿ ಇದೆ ಎಂದು ಹೈಕೋರ್ಟ್‌ ಪುನರುಚ್ಛರಿಸಿದೆ.

ಕೇರಳ ಹೈಕೋರ್ಟ್‌ನಲ್ಲಿ ಇತ್ತೀಚೆಗೆ ಕಾಸರಗೋಡಿನ ಯುವ ವಕೀಲ ಪ್ರದೀಪ್ ರಾವ್ ಮೇಲ್ನೋಡು ಅವರು ಜಿಲ್ಲಾಧಿಕಾರಿ ಆದೇಶವನ್ನು ಪ್ರಶ್ನಿಸಿ ಅರ್ಜಿ ಸಲ್ಲಿಸಿದ್ದು ಸಲ್ಲಿಸಿದ್ದು ಅರ್ಜಿದಾರರ ಪರ ಹೈಕೋರ್ಟ್‌ ತೀರ್ಪು ನೀಡಿದ್ದನ್ನಿಲ್ಲಿ ಸ್ಮರಿಸಬಹುದು. ಸುಬ್ರಹ್ಮಣ್ಯ ಏನಂಕೂಡ್ಲು ಅವರು ಪ್ರದೀಪ್ ರಾವ್ ಅವರ ಸಲಹೆ ಪಡೆದೇ ಹೈಕೋರ್ಟ್ ಮೆಟ್ಟಿಲೇರಿದ್ದರು.

ವಿಮಾನದ ತುರ್ತು ನಿರ್ಗಮನ ಬಾಗಿಲು ತೆರೆದು ಬಿಜೆಪಿ ಸಂಸದ ತೇಜಸ್ವಿ ಸೂರ್ಯ ದುಂಡಾವರ್ತಿ

https://pragati.taskdun.com/bjp-mp-tejaswi-surya-opened-the-emergency-exit-door-of-the-plane/

*ಬೇರೆ ಬೇರೆ ಕ್ಷೇತ್ರಗಳಿಂದ ಸ್ಪರ್ಧಿಸುವವರು ಲೀಡರ್ ಅಲ್ವಾ?; 2 ಕ್ಷೇತ್ರಗಳ ಸ್ಪರ್ಧೆ ಬಗ್ಗೆ ಸಿದ್ದರಾಮಯ್ಯ ಸ್ಪಷ್ಟನೆ*

https://pragati.taskdun.com/siddaramaiahpressmeetbagalakote/

*ಕೋಳಿಗಳನ್ನು ಬಂಧಿಸಿ ಸೆಲ್ ನಲ್ಲಿಟ್ಟ ಪೊಲೀಸರು*

https://pragati.taskdun.com/koppalaraidpolicearresthen/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button