LatestUncategorized

*ಅಮಿತ್ ಶಾ ಭೇಟಿಯಾದ್ರಾ ರಮೇಶ್ ಜಾರಕಿಹೊಳಿ?*

ಪ್ರಗತಿವಾಹಿನಿ ಸುದ್ದಿ; ನವದೆಹಲಿ: ಸಿಡಿ ಬಹಿರಂಗ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿಯಾಗಿ ಚರ್ಚೆ ನಡೆಸಿದ್ದಾರೆ ಎಂದು ರಮೇಶ ಜಾರಕಿಹೊಳಿ ಆಪ್ತಮೂಲಗಳು ತಿಳಿಸಿವೆ.

 

Home add -Advt

ಶುಕ್ರವಾರ ಸಂಜೆ ಭೇಟಿಯಾಗುವುದಾಗಿ ಹೇಳಿದ್ದ ರಮೇಶ್, ಗುರುವಾರ ರಾತ್ರಿಯೇ ಭೇಟಿಯಾಗಿದ್ದಾಗಿ ಈಗ ಹೇಳುತ್ತಿದ್ದಾರೆ.

ಆದರೆ ಅಮಿತ್ ಶಾ ಅಥವಾ ಗೃಹ ಇಲಾಖೆಯ ಮೂಲಗಳು ಇದನ್ನು ಖಚಿತಪಡಿಸಿಲ್ಲ.

ನಿನ್ನೆ ರಾತ್ರಿ ಅಮಿತ್ ಶಾ ಅವರ ಮನೆಯಲ್ಲಿಯೇ  ಭೇಟಿಯಾಗಿ ಸಿಡಿ ಪ್ರಕರಣವನ್ನು ಸಿಬಿಐಗೆ ವಹಿಸುವಂತೆ ಮನವಿ ಮಾಡಿದ್ದಾರೆ ಎಂದು ಹೇಳಲಾಗಿದೆ.

 

ಅಮಿತ್ ಶಾ ಅವರನ್ನು ಭೇಟಿಯಾಗಿರುವ ರಮೇಶ್ ಜಾರಕಿಹೊಳಿ ಸಿಡಿ ಕೇಸ್ ಗೆ ಸಂಬಂಧಿಸಿದಂತೆ ಹಲವು ದಾಖಲೆಗಳನ್ನು ನೀಡಿದ್ದಾರೆ. ಅಲ್ಲದೇ ಡಿ.ಕೆ.ಶಿವಕುಮಾರ್ ಬಿಜೆಪಿಯ ಹಲವು ನಾಯಕರ ಸಿಡಿಗಳನ್ನು ಇಟ್ಟುಕೊಂಡು ಬ್ಲ್ಯಾಕ್ ಮೇಲ್ ತಂತ್ರ ಅನುಸರಿಸುತ್ತಿದ್ದಾರೆ ಎಂದು  ದೂರಿದ್ದು, ಈ ನಿಟ್ಟಿನಲ್ಲಿಯೂ ಗಮನಹರಿಸುವಂತೆ ಕೋರಿದ್ದಾರೆ. ಸಿಡಿ ಕೇಸ್ ಸಿಬಿಐಗೆ ವಹಿಸುವುದರಿಂದ ಆಗುವ ಲಾಭ-ನಷ್ತದ ಬಗ್ಗೆಯೂ ವಿವರಿಸಿದ್ದಾರೆ ಎಂದು ಅವರ ಆಪ್ತ ಮೂಲಗಳು ಹೇಳಿವೆ.

ಆದರೆ ಅಮಿತ್ ಶಾ ಅಥವಾ ಗೃಹ ಇಲಾಖೆಯ ಮೂಲಗಳು ಇದನ್ನು ಖಚಿತಪಡಿಸಿಲ್ಲ.

*ಕುತೂಹಲ ಕೆರಳಿಸಿದ ಡಿ.ಕೆ.ಶಿವಕುಮಾರ್- ನಟ ಕಿಚ್ಚ ಸುದೀಪ್ ಭೇಟಿ*

https://pragati.taskdun.com/d-k-shivakumarkichcha-sudeepmeet/

Related Articles

Back to top button