
ಪ್ರಗತಿವಾಹಿನಿ ಸುದ್ದಿ; ರಾಮನಗರ: ಕುರಿ ಮೈ ತೊಳೆಯಲೆಂದು ಕೆರೆಗೆ ಇಳಿದಿದ್ದ ಒಂದೇ ಕುಟುಂಬದ ಮೂವರು ನೀರು ಪಾಲಾಗಿರುವ ಧಾರುಣ ಘಟನೆ ರಾಮನಗರ ಜಿಲ್ಲೆಯ ಮಾಗಡಿ ತಾಲೂಕಿನ ಮುತ್ತಸಾಗರ ಗ್ರಾಮದಲ್ಲಿ ನಡೆದಿದೆ.
ನಾಗರಾಜು (30), ಜ್ಯೋತಿ (35), ಲಕ್ಷ್ಮಿ (22) ಮೃತ ದುರ್ದೈವಿಗಳು. ಅಗ್ನಿಶಾಮಕ ಸಿಬ್ಬಂದಿಗಳು ಸ್ಥಳಕ್ಕೆ ಧಾವಿಸಿ ಇಬ್ಬರ ಮೃತದೇಹಗಳನ್ನು ಹೊರಕ್ಕೆ ತೆಗೆದಿದ್ದಾರೆ. ಮತ್ತೋರ್ವರ ಶವಕ್ಕಾಗಿ ಶೋಧಕಾರ್ಯಾಚರಣೆ ನಡೆದಿದೆ.
ಕುದೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
 
					 
				 
					 
					 
					 
					
 
					 
					 
					


