Kannada NewsKarnataka NewsLatest

ಅಥಣಿ ಕ್ಷೇತ್ರದ ಜೆಡಿಎಸ್ ಮುಖಂಡರು ಕಾಂಗ್ರೆಸ್ ಸೇರ್ಪಡೆ

ಪ್ರಗತಿವಾಹಿನಿ ಸುದ್ದಿ, ಅಥಣಿ: ಅಥಣಿ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಮುಖಂಡರು ಮಾಜಿ ಡಿಸಿಎಂ, ಕಾಂಗ್ರೆಸ್ ಅಭ್ಯರ್ಥಿ ಲಕ್ಷ್ಮಣ ಸವದಿ ಅವರ ಸಮ್ಮುಖದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು.

ಜೆಡಿಎಸ್ ತಾಲೂಕು ಘಟಕಾಧ್ಯಕ್ಷ ಅಣ್ಣಾರಾಯ ಹಾಲಳ್ಳಿ, ಕಾರ್ಯಕಾರಿಣಿ ಸಮಿತಿ ಮಾಜಿ ಸದಸ್ಯ ಲಕ್ಕಪ್ಪ ಮುಡಸಿ, ಬ್ಲಾಕ್ ಅಧ್ಯಕ್ಷೆ ಶೋಭಾ ಆಲಬಾಳ, ರವಿ ಹಂಜಿ, ಬಾಬುರಾವ ಕುಲ್ಲೊಳ್ಳಿ, ಬಸಪ್ಪ ಬಿರಾದಾರ, ಮಲಕಪ್ಪ ಹಲಗೊಂಡ, ಚನ್ನಪ್ಪ ಹಾಲಳ್ಳಿ, ಗೋಪಾಲ ಬೇಡರಹಟ್ಟಿ, ರವಿ ಬೇಡರಹಟ್ಟಿ, ಸುರೇಶ ಖೋತ್ ಮಲ್ಲಪ್ಪ, ಇಂಗಳಿ, ಶಿವಾನಂದ ಗಲಗಲಿ, ಸಿದ್ದಲಿಂಗ ಢವಳೇಶ್ವರ, ಶ್ರೀಶೈಲ ಸಿಂಧೂರ, ಮುತ್ತಪ್ಪ ಮರನೂರ, ಜಗದೀಶ ಹಿರೇಮಠ, ಹನುಮಂತ ಮಾಳಿ, ಸುರೇಶ ಮಾಕಾಣಿ, ತವನಪ್ಪ ಸವರಿ, ಧರೆಪ್ಪ ಮಾಳಿ, ದುಂಡಪ್ಪ ಮಾಳಿ, ಮಾರುತಿ ಕಾಂಬಳೆ, ಶಾನು ಕೋಹಳ್ಳಿ ಸೇರಿದಂತೆ ಹಲವು ಮುಖಂಡರು ಕಾಂಗ್ರೆಸ್ ಸೇರಿದರು.

Home add -Advt

ಪಕ್ಷಕ್ಕೆ ಸೇರ್ಪಡೆಗೊಂಡವರನ್ನು ಲಕ್ಷ್ಮಣ ಸವದಿ ಅವರು ಕಾಂಗ್ರಸ್ ಧ್ವಜ ಹಸ್ತಾಂತರಿಸುವ ಮೂಲಕ ಬರಮಾಡಿಕೊಂಡರು. ಕಾಂಗ್ರೆಸ್ ಮುಖಂಡರಾದ ಗಜಾನನ ಮಂಗಸೂಳಿ, ಅಥಣಿ ಬ್ಲಾಕ್ ಅಧ್ಯಕ್ಷ ಸಿದ್ಧಾರ್ಥ ಶಿಂಗೆ, ತೆಲಸಂಗ ಬ್ಲಾಕ್ ಅಧ್ಯಕ್ಷ ಶ್ರೀಕಾಂತ ಪೂಜಾರಿ, ಅನಿಲ ಸುಣಧೋಳಿ ಮುಂತಾದವರು ಈ ಸಂದರ್ಭದಲ್ಲಿ ಹಾಜರಿದ್ದರು.

https://pragati.taskdun.com/dodmanes-daughter-in-law-geeta-sivarajkumar-former-minister-b-b-ningaiah-joins-congress/
https://pragati.taskdun.com/the-2020-21st-and-22nd-year-tayamma-s-c-mallaya-datti-award-announced/
https://pragati.taskdun.com/beer-party-of-bjp-workers-in-the-middle-of-the-road-the-drunken-game-that-tarnished-the-lotus-party/

Related Articles

Back to top button