Belagavi NewsBelgaum NewsEducationKannada NewsKarnataka News

ಸರ್ಕಾರಿ ಶಾಲಾ ಶಿಕ್ಷಕರ ಪರಸ್ಪರ ವರ್ಗಾವಣೆಯ ಗಣಕೀಕೃತ ಕೌನ್ಸೆಲಿಂಗ್ ಜು.18 ರಿಂದ 25ರವರೆಗೆ


ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ೨೦೨೨-೨೩ನೇ ಸಾಲಿನ ಬೆಳಗಾವಿ ವಿಭಾಗದ ಜಿಲ್ಲೆಯ ಹೊರಗಿನ ವಿಭಾಗದೊಳಗಿನ ಸರ್ಕಾರಿ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕರನ್ನು ಒಳಗೊಂಡಂತೆ ಪ್ರಾಥಮಿಕ ಶಾಲಾ ಶಿಕ್ಷಕರು ಹಾಗೂ ಪ್ರೌಢ ಶಾಲಾ ಶಿಕ್ಷಕರ ಕೋರಿಕೆ/ಪರಸ್ಪರ ವರ್ಗಾವಣೆಯ ಗಣಕೀಕೃತ ಕೌನ್ಸಲಿಂಗ ಜುಲೈ ೧೮ ೨೦೨೩ ರಿಂದ ಜು.೨೫ ೨೦೨೩ ರವರೆಗೆ ಬೆಳಗಾವಿಯ ಕೇಂದ್ರ ಅಂಚೆ ಕಚೇರಿ ಹತ್ತಿರದ ಬಿ.ಕೆ ಮಾಡೆಲ್ ಪ್ರೌಢಶಾಲೆಯಲ್ಲಿ ನಡೆಯಲಿದೆ.
ಪ್ರಾಥಮಿಕ ಶಾಲಾ ಶಿಕ್ಷಕರ ಸಾಮಾನ್ಯ ಕೋರಿಕೆ ವರ್ಗಾವಣೆ ವೇಳಾಪಟ್ಟಿ:
ಜುಲೈ.೧೮ ೨೦೨೩ ರಂದು ಬೆಳಿಗ್ಗೆ ೯ ಗಂಟೆಯಿಂದ ವಿಶೇಷ ಶಿಕ್ಷಕರು, ದೈಹಿಕ ಶಿಕ್ಷಕರು ಗ್ರೇಡ್-೨, ಮುಖ್ಯ ಶಿಕ್ಷಕರು ಕ್ರ.ಸಂ ೧ ರಿಂದ ಮುಕ್ತಾಯದವರೆಗೆ, ಸಹ ಶಿಕ್ಷಕರು ಕ್ರ.ಸಂ ೧ ರಿಂದ ೩೫೦ ರವರೆಗೆ ನಡೆಯಲಿದೆ.
ಜುಲೈ.೧೯ ೨೦೨೩ ರಂದು ಬೆಳಿಗ್ಗೆ ೯ ಗಂಟೆಯಿಂದ ಸಹ ಶಿಕ್ಷಕರು ಕ್ರ.ಸಂ ೩೫೧ ರಿಂದ ೮೦೦ ರವರೆಗೆ ನಡೆಯಲಿದೆ. ಜುಲೈ.೨೦ ೨೦೨೩ ರಂದು ಬೆಳಿಗ್ಗೆ ೯ ಗಂಟೆಯಿಂದ ಸಹ ಶಿಕ್ಷಕರು ಕ್ರ.ಸಂ ೮೦೧ ರಿಂದ ಮುಕ್ತಾಯದವರೆಗೆ ನಡೆಯಲಿದೆ.
ಪ್ರೌಢ ಶಾಲಾ ಶಿಕ್ಷಕರ ಸಾಮಾನ್ಯ ಕೋರಿಕೆ ವರ್ಗಾವಣೆ ವೇಳಾಪಟ್ಟಿ:
ಜುಲೈ.೨೧ ೨೦೨೩ ರಂದು ಬೆಳಿಗ್ಗೆ ೯ ಗಂಟೆಯಿಂದ ವಿಶೇಷ ಶಿಕ್ಷಕರು, ದೈಹಿಕ ಶಿಕ್ಷಕರು ಗ್ರೇಡ್-೧ ಕ್ರ.ಸಂ ೧ ರಿಂದ ಮುಕ್ತಾಯದವರೆಗೆ, ಸಹ ಶಿಕ್ಷಕರು ಕ್ರ.ಸಂ ೧ ರಿಂದ ೨೦೦ ರವರೆಗೆ ನಡೆಯಲಿದೆ.
ಜುಲೈ.೨೨ ೨೦೨೩ ರಂದು ಬೆಳಿಗ್ಗೆ ೯ ಗಂಟೆಯಿಂದ ಸಹ ಶಿಕ್ಷಕರು ಕ್ರ.ಸಂ ೨೦೧ ರಿಂದ ೬೦೦ ರವರೆಗೆ ನಡೆಯಲಿದೆ. ಜುಲೈ.೨೪ ೨೦೨೩ ರಂದು ಬೆಳಿಗ್ಗೆ ೯ ಗಂಟೆಯಿಂದ ಸಹ ಶಿಕ್ಷಕರು ಕ್ರ.ಸಂ ೬೦೧ ರಿಂದ ಮುಕ್ತಾಯದವರೆಗೆ ನಡೆಯಲಿದೆ.
ಪ್ರಾಥಮಿಕ ಶಾಲಾ ಶಿಕ್ಷಕರ ಸಾಮಾನ್ಯ ಪರಸ್ಪರ ವರ್ಗಾವಣೆ ವೇಳಾಪಟ್ಟಿ:
ಅದೇ ರೀತಿಯಲ್ಲಿ ಜುಲೈ.೨೫ ೨೦೨೩ ರಂದು ಬೆಳಿಗ್ಗೆ ೯ ಗಂಟೆಯಿಂದ ಸಹ ಶಿಕ್ಷಕರು ಕ್ರ.ಸಂ ೧ ರಿಂದ ಮುಕ್ತಾಯದವರೆಗೆ ನಡೆಯಲಿದೆ.
ಪ್ರೌಢ ಶಾಲಾ ಶಿಕ್ಷಕರ ಸಾಮಾನ್ಯ ಪರಸ್ಪರ ವರ್ಗಾವಣೆ ವೇಳಾಪಟ್ಟಿ:
ಜುಲೈ. ೨೫ ೨೦೨೩ ರಂದು ಬೆಳಿಗ್ಗೆ ೧೦ ಗಂಟೆಯಿಂದ ವಿಶೇಷ ಶಿಕ್ಷಕರು, ದೈಹಿಕ ಶಿಕ್ಷಕರು ಗ್ರೇಡ್-೧, ಸಹ ಶಿಕ್ಷಕರು ಕ್ರ.ಸಂ ೧ ರಿಂದ ಮುಕ್ತಾಯದವರೆಗೆ ನಡೆಯಲಿದೆ.
ಸದರಿ ವೇಳಾಪಟ್ಟಿಯಂತೆ ಅರ್ಹ ಶಿಕ್ಷಕರು ಆದ್ಯತೆಯ ಪೂರಕ ದಾಖಲೆಗಳೊಂದಿಗೆ ವರ್ಗಾವಣೆ ಅರ್ಜಿಯ ಪ್ರತಿ, ಮೂಲ ದಾಖಲೆಗಳು ಹಾಗೂ ಶಿಕ್ಷಕರ ಮೂಲ ಐಡಿ ಕಾರ್ಡನೊಂದಿಗೆ ಹಾಜರಾಗಬೇಕು. ವರ್ಗಾವಣೆ ಕೌನ್ಸೆಲಿಂಗ್ ಜರುಗುವ ಆವರಣಕ್ಕೆ ಸಂಬಂಧಿಸಿದ ಶಿಕ್ಷಕರು ಮಾತ್ರ ಹಾಜರಾಗಬೇಕು ಹಾಗೂ ಅಂತಿಮ ಆದ್ಯತಾ ಪಟ್ಟಿಯಲ್ಲಿನ ಆದ್ಯತೆಯನ್ನು ಖಚಿತಪಡಿಸಿಕೊಂಡು ಕೌನ್ಸೆಲಿಂಗ್‌ಗೆ ಹಾಜರಾಗಬೇಕು ಎಂದು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಲಿ ಹಾಗೂ ಶಾಲಾ ಶಿಕ್ಷಣ ಇಲಾಖೆ ಪದನಿಮಿತ್ತ ಸಹನಿರ್ದೇಶಕರು, ಬೆಳಗಾವಿ ವಿಭಾಗದ ವಿಭಾಗೀಯ ಕಾರ್ಯರ್ಶಿಗಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button